ಗನ್ ತೋರಿಸಿ ಪತಿ ಎದುರಲ್ಲೇ ಪತ್ನಿಯ ಗ್ಯಾಂಗ್‍ರೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

GangRape--01

ಮುಜಾಫರ್‍ನಗರ್, ಅ.7-ನಾಲ್ವರು ದುಷ್ಕರ್ಮಿಗಳು ಗನ್ ತೋರಿಸಿ ಪ್ರಾಣ ಬೆದರಿಕೆವೊಡ್ಡಿ ಪತಿ ಮತ್ತು ಮೂರು ತಿಂಗಳ ಮಗುವಿನ ಎದುರಲ್ಲೇ 30 ವರ್ಷದ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಮುಜಾಫರ್‍ನಗರ್ ಜಿಲ್ಲೆಯಲ್ಲಿ ನಡೆದಿದೆ.  ಅನಾರೋಗ್ಯಕ್ಕೆ ಒಳಗಾದ ಮಗುವನ್ನು ದಂಪತಿ ವೈದ್ಯರ ಬಳಿ ಕರೆದೊಯ್ಡು ಚಿಕಿತ್ಸೆ ಕೊಡಿಸಿ ನಂತರ ಮೋಟಾರ್ ಬೈಕ್‍ನಲ್ಲಿ ಹಿಂದಿರುಗುತ್ತಿದ್ದಾಗ, ಕಾರಿನಲ್ಲಿ ಬಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಡ್ಡಗಟ್ಟಿದರು. ಮಗುವನ್ನು ಮಹಿಳೆಯಿಂದ ಕಿತ್ತುಕೊಂಡು, ಪತ್ನಿಯನ್ನು ಥಳಿಸಿ ಮರಕ್ಕೆ ಕಟ್ಟಿ ಹಾಕಿದರು. ಬಳಿಕ ಗನ್ ತೋರಿಸಿ ಬೆದರಿಸಿ ಮಹಿಳೆಯನ್ನು ಕಬ್ಬಿನಗದ್ದೆಗೆ ಎಳೆದೊಯ್ಡು ಸಾಮೂಹಿಕ ಅತ್ಯಾಚಾರ ಎಸಗಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕೃತ್ಯ ಎಸಗಿದ ಕಾಮುಕರು ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಗ್ರಾಮಕ್ಕೆ ಬಂದು ಕೊಲ್ಲುವುದಾಗಿ ಬೆದರಿಕೆವೊಡ್ಡಿ ಪರಾರಿಯಾದರು. ಮಗುವಿನ ಅಳು ಮತ್ತು ಮಹಿಳೆಯ ಚಿರಾಟ ಕೇಳಿ ನಂತರ ಸ್ಥಳಕ್ಕೆ ಧಾವಿಸಿದ ಇತರ ಗ್ರಾಮಸ್ಥರು ದಂಪತಿ ಮತ್ತು ಮಗುವಿಗೆ ಆಸ್ಪತೆಯಲ್ಲಿ ಚಿಕಿತ್ಸೆ ಕೊಡಿಸಿದರು.  ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಲಕ್ನೋದಲ್ಲಿ ಮತ್ತೊಂದು ಗ್ಯಾಂಗ್‍ರೇಪ್ : ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮತ್ತೊಂದು ಆಘಾತಕಾರಿ ಘಟನೆಯೊಂದರಲ್ಲಿ ಯುವತಿಯೊಬ್ಬಳ ಮೇಲೆ ಮೂವರು ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಗಾಯಗೊಂಡ ಯುವತಿಗೆ ಚಿಕಿತ್ಸೆ ನೀಡಲಾಗಿದೆ. ಯುವತಿ ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.

Facebook Comments

Sri Raghav

Admin