ಜಾಧವ್ ಪ್ರಕರಣ : ಐಸಿಜೆ ಮುಂದೆ ಅರ್ಜಿ ಸಲ್ಲಿಸಲು ಪಾಕ್ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

jadav

ಇಸ್ಲಾಮಾಬಾದ್,ಅ.7- ನಿವೃತ್ತ ನೌಕಾಧಿಕಾರಿ ಕುಲಭೂಷಣ್ ಜಾಧವ್‍ಗೆ ಮರಣ ದಂಡನೆ ವಿಧಿಸಿದ್ದ ತನ್ನ ನಿರ್ಧಾರ ಪ್ರಶ್ನಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ(ಐಸಿಜೆ) ಭಾರತ ಸಲ್ಲಿಸಿರುವ ಆಕ್ಷೇಪಣೆಗೆ ಪ್ರತಿಯಾಗಿ ಪಾಕಿಸ್ತಾನ ತನ್ನ ವಾದದ ಮನವಿಯನ್ನು ಸಲ್ಲಿಸಲು ಸಜ್ಜಾಗಿದೆ. ಬೇಹುಗಾರಿಕೆ ಮತ್ತು ಬುಡಮೇಲು ಕೃತ್ಯ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಯಾದವರನ್ನು 2016ರಲ್ಲಿ ಬಲಚಿಸ್ಥಾನದಲ್ಲಿ ಪಾಕ್ ಅಧಿಕಾರಿಗಳು ಬಂಧಿಸಿದ್ದರು.
ನಂತರ ಅವರಿಗೆ ಪಾಕಿಸ್ತಾನ ಮಿಲಟರಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ಸೂಕ್ತ ಸಾಕ್ಷ್ಯಾಧಾರವಿಲ್ಲದೆ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ ಎಂದು ಭಾರತ ಆಕ್ಷೇಪಣೆ ಸಲ್ಲಿಸಿತ್ತು.  ಈ ಬಗ್ಗೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ-ವಿವಾದ ನಡೆದು ಪಾಕ್ ಸೇನಾ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಲಾಗಿತ್ತು.

Facebook Comments

Sri Raghav

Admin