ಮಹಿಳೆಯರು-ಮಕ್ಕಳಿಗೆ ಬೆಂಗಳೂರು ಸೇಫ್

ಈ ಸುದ್ದಿಯನ್ನು ಶೇರ್ ಮಾಡಿ

Suneel-Kuamr--01

ಬೆಂಗಳೂರು, ಅ.7- ಬೆಂಗಳೂರು ನಗರ ಮಹಿಳೆಯರಿಗೆ ಸುರಕ್ಷಿತವಾಗಿದ್ದು, ಇದನ್ನು ಸಂಪೂರ್ಣ ಸುರಕ್ಷತಾ ನಗರವನ್ನಾಗಿ ಮಾಡುವುದು ನಮ್ಮ ಧ್ಯೇಯವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್‍ಕುಮಾರ್ ತಿಳಿಸಿದರು. ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಿಳೆಯರ ರಕ್ಷಣೆಗೆ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಬೆಂಗಳೂರು ನಗರ ಪೊಲೀಸರ ಸಹಯೋಗದೊಂದಿಗೆ ಬಿ.ಪ್ಯಾಕ್ ಎಂಬ ಸಂಸ್ಥೆ ಅಭಿಯಾನವನ್ನು ಜಾರಿಗೊಳಿಸಿದೆ ಎಂದರು.

ಬೆಂಗಳೂರಿನಲ್ಲಿ ಮಹಿಳೆ ಮತ್ತು ಮಕ್ಕಳನ್ನು ಸುರಕ್ಷಿತವಾಗಿಡುವ ಧ್ಯೇಯ ಹೊಂದಿದ್ದೇವೆ. ಇಬ್ಬರು ಮಹಿಳಾ ಪೊಲೀಸರು ಹೊಯ್ಸಳ ವಾಹನಕ್ಕೆ ಚಾಲಕರಾಗುವುದಾಗಿ ಮುಂದೆ ಬಂದಿದ್ದಾರೆ. ಆದರೆ, ಅವರ ಬಳಿ ಲೈಸೆನ್ಸ್ ಇಲ್ಲ. ಅವರ ಆಸಕ್ತಿ ಗಮನಿಸಿದ್ದು, ಲೈಸೆನ್ಸ್ ಸಿಕ್ಕಾಗ ಖಾಯಂ ಆಗಿ ಅವರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು. ಪೊಲೀಸ್ ಇಲಾಖೆಯಲ್ಲಿ ಈ ಹಿಂದೆ ಶೇ.10ರಷ್ಟು ಮಹಿಳೆಯರಿಗೆ ಮೀಸಲಾತಿ ನಿಗದಿಪಡಿಸಲಾಗಿತ್ತು. ಇದೀಗ ಶೇ.20ರಷ್ಟು ಉದ್ಯೋಗ ಮೀಸಲಾತಿ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ಮಹಿಳಾ ಪೊಲೀಸ್ ಪಡೆ ಹೆಚ್ಚಿನದಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ ಮಾತನಾಡಿ, ಎಲ್ಲ ಪೊಲೀಸ್ ಠಾಣೆಗಳಲ್ಲೂ ಮಹಿಳೆಯರು ನೀಡುವ ದೂರು ಮೊದಲು ಸ್ವೀಕರಿಸಬೇಕು. ನಗರದ ಸಾರ್ವಜನಿಕ ರಸ್ತೆಗಳಲ್ಲಿ ಒಂದು ಸಾವಿರ ಸಿಸಿಟಿವಿ ಅಳವಡಿಸಲಾಗಿದೆ. ಆದರೆ, ಇದು ಕಡಿಮೆಯೆ. ನಸಂಖ್ಯೆಗನುಗುಣವಾಗಿ ಮುಂದಿನ ದಿನಗಳಲ್ಲಿ ಸಿಸಿಟಿವಿಗಳನ್ನು ಎಲ್ಲ ವೃತ್ತಗಳಲ್ಲೂ ಅಳವಡಿಸಲಾಗುವುದು ಎಂದರು.  ನಗರದಲ್ಲಿ ಪುರುಷರಿಗೂ ಕೆಲವು ಕಡೆಗಳಲ್ಲಿ ರಕ್ಷಣೆ ಇಲ್ಲ. ಎಲ್ಲ ಬೀದಿಗಳಲ್ಲೂ ಸ್ಟ್ರೀಟ್‍ಲೈಟ್ ಅಳವಡಿಸುವಂತೆ ಬಿಬಿಎಂಪಿಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin