ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರಿಗೆ 20 ವರ್ಷ ಜೈಲು

ಈ ಸುದ್ದಿಯನ್ನು ಶೇರ್ ಮಾಡಿ

Jailed-01

ಮೈಸೂರು, ಅ.8-ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಇಬ್ಬರಿಗೆ ಮೈಸೂರಿನ 7ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ, 24 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಕೆ.ಆರ್.ನಗರದ ಬಸವರಾಜಪುರದ ನಿವಾಸಿ ಚೇತನ್ (28) ಮತ್ತು ವಸಂತ (27) ಶಿಕ್ಷೆಗೆ ಒಳಗಾದವರು.

2012ರ ಸೆಪ್ಟೆಂಬರ್ 1ರಂದು ಸಂಜೆ ಪ್ರೇಮಿಗಳು ಕೆ.ಆರ್.ನಗರದಿಂದ ಬಸವಪುರಕ್ಕೆ ಆಗಮಿಸಿ ಆರೋಪಿ ಚೇತನ್ ಅವರ ಜಮೀನಿನ ಬಳಿ ಕುಳಿತಿದ್ದರು. ಈ ಸಂದರ್ಭದಲ್ಲಿ ಇವರ ಬಳಿ ಬಂದ ಚೇತನ್ ಹುಡುಗಿಯ ಸ್ನೇಹಿತನನ್ನು ಹೆದರಿಸಿ ಮೊಬೈಲ್ ಕಿತ್ತುಕೊಂಡು ಕಳುಹಿಸಿದ್ದಾನೆ. ನಂತರ ವಸಂತ್ ಕೂಡ ಅಲ್ಲಿಗೆ ಬಂದಿದ್ದು , ಇಬ್ಬರೂ ಅಪ್ರಾಪ್ತೆಯ ಮೇಲೆ ಅತ್ಯಾಚಾರ ವೆಸಗಿದ್ದರು. ಸ್ಥಳೀಯರೇ ಈ ಇಬ್ಬರನ್ನು ಕಾಮುಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇಬ್ಬರು ಎರಡು ವರ್ಷ ಜೈಲು ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದರು.

ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿ ದಂಡದಲ್ಲಿ ಸಂತ್ರಸ್ತೆಗೆ ಶೇ.20ರಷ್ಟು ಹಣವನ್ನು ನೀಡಬೇಕೆಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin