ಅ.10ರಂದು ಬೆಂಗಳೂರಿನ ಈ ಏರಿಯಾಗಳಲ್ಲಿ ನೀರು ಬರಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

multi-stick-water

ಬೆಂಗಳೂರು, ಅ.8-ನಗರಕ್ಕೆ ನೀರು ಸರಬರಾಜು ಮಾಡುವ ಕಾವೇರಿ 1ನೇ ಹಂತದ ತೊರೆಕಾಡನಹಳ್ಳಿಯ 66 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಅ. 10ರಂದು ತುರ್ತು ನಿರ್ವಹಣಾ ಕಾಮಗಾರಿ ನಡೆಯುವುದರಿಂದ ಅಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ನಗರದ ಕೆಲವು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಚಾಮರಾಜಪೇಟೆ, ಜಯನಗರ 3, 4, 7 ಮತ್ತು 8ನೇ ಬ್ಲಾಕ್, ಜಾನ್ಸನ್ ಮಾರುಕಟ್ಟೆ, ಕೋರಮಂಗಲ, ದೊಮ್ಮಲೂರು, ಕುಮಾರಸ್ವಾಮಿ ಬಡಾವಣೆ, ಸಿಎಲ್‍ಆರ್ ಪ್ರದೇಶ , ಹಲಸೂರು, ಕತ್ರಿಗುಪ್ಪೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Facebook Comments

Sri Raghav

Admin