ಎಣ್ಣೆ ಹೊಡೆದು ಪಾರ್ಟಿ ಮಾಡಿ, ನಂತರ ಜೊತೆಗಿದ್ದ ಸ್ನೇಹಿತನನ್ನೇ ಕತ್ತು ಕೊಯ್ದು ಕೊಂದರು..!

ಈ ಸುದ್ದಿಯನ್ನು ಶೇರ್ ಮಾಡಿ

Murder-Blood

ಬೆಂಗಳೂರು, ಅ.8- ಚೆನ್ನಾಗಿ ಪಾರ್ಟಿ ಮಾಡಿದ ಸ್ನೇಹಿತರೇ ನಂತರ ಜಗಳ ತೆಗೆದು ಗಾಜಿನ ತುಂಡಿನಿಂದ ಯುವಕನೊಬ್ಬನ ಕತ್ತು ಕೊಯ್ದು ಕೊಲೆ ಮಾಡಿರುವ ಹೇಯ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪುಷ್ಪಾಂಜಲಿ ಕಲ್ಯಾಣ ಮಂಟಪದ ಹಿಂಬದಿ ರಸ್ತೆ ವಾಸಿ ಸುರೇಶ್‍ಕುಮಾರ್ (26) ಕೊಲೆಯಾದ ಯುವಕ.

ಈತ ರಿಯಲ್ ಎಸ್ಟೇಟ್ ಏಜೆಂಟ್. ನಿನ್ನೆ ರಾತ್ರಿ ಜೆ.ಪಿ.ನಗರ ಐದನೇ ಹಂತದ ತೋಟವೊಂದರಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಾನೆ. ಈ ವೇಳೆ ಸ್ನೇಹಿತರು ಜಗಳ ತೆಗೆದು ಗಾಜಿನ ತುಂಡಿನಿಂದ ಸುರೇಶ್‍ಕುಮಾರನ ಕುತ್ತಿಗೆ ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin