ಕುರಿಗಾಹಿಗಳ ಮೇಲೆ ಕರಡಿಗಳ ಹಿಂಡು ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Beer-Attack--01

ಮಧುಗಿರಿ, ಅ.8- ಕುರಿಗಾಹಿಗಳ ಮೇಲೆ ಕರಡಿಗಳ ಹಿಂಡು ದಾಳಿ ಮಾಡಿದ ಪರಿಣಾಮ ಒಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಯ ಬ್ರಹ್ಮಸಮುದ್ರದ ಬಳಿ ನಡೆದಿದೆ. ತಾಲೂಕಿನ ಹಳೇ ಗೊಲ್ಲರಹಟ್ಟಿಯ ನಿವಾಸಿ ಮಲ್ಲಪ್ಪ (45) ಕರಡಿ ದಾಳಿಗೊಳಗಾದ ವ್ಯಕ್ತಿ.
ಈತ ತನ್ನ ಇಬ್ಬರು ಸ್ನೇಹಿತರೊಂದಿಗೆ ಹೊಲದಲ್ಲಿ ಕುರಿ ಕಾಯುತ್ತಿದ್ದ ಸಂದರ್ಭದಲ್ಲಿ ಪೊದೆಯೊಳಗಿಂದ ಮೂರು ಕರಡಿಗಳು ಏಕಾ ಏಕಿ ಇವರ ಮೇಲೆ ದಾಳಿ ಮಾಡಿವೆ.

ಇಬ್ಬರು ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಆದರೆ ಮಲ್ಲಪ್ಪ ಸಿಕ್ಕಿಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಕರಡಿಗಳ ಜೊತೆ ಮರಿ ಕರಡಿಗಳಿದ್ದುದರಿಂದ ರೊಚ್ಚಿಗೆದ್ದ ಕರಡಿಗಳು ದಾಳಿ ಮಾಡಿವೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ್ದು, ಗಾಯಾಳುವಿಗೆ ಸರ್ಕಾರದ ವತಿಯಿಂದ ಪರಿಹಾರ ದೊರಕಿಸಿಕೊಡುವುದಾಗಿ ವಲಯ ಅರಣ್ಯಾಧಿಕಾರಿ ಚಿನ್ನಪ್ಪ ತಿಳಿಸಿದ್ದಾರೆ.

Facebook Comments

Sri Raghav

Admin