ಟೀ ಮಾರುತಿದ್ದವನು ಪ್ರಧಾನಿಯಾಗಿ ಹುಟ್ಟೂರಿಗೆ ಬಂದಾಗ..!

ಈ ಸುದ್ದಿಯನ್ನು ಶೇರ್ ಮಾಡಿ

Modi--x01

ವದ್‍ನಗರ್ (ಗುಜರಾತ್), ಅ.8- ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಈಗಿನಿಂದಲೇ ಬಿರುಸಿನ ತಯಾರಿ ನಡೆಸಿದ್ದು, ಈ ಕಾರ್ಯತಂತ್ರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ನಿನ್ನೆಯಿಂದ ಆರಂಭಿಸಿರುವ ಎರಡು ದಿನಗಳ ರಾಜ್ಯ ಪ್ರವಾಸ ಭಾರೀ ಪ್ರಚಾರ ಪಡೆದುಕೊಂಡಿದೆ.

Modi  01

ಇದೇ ವೇಳೆ ಮೋದಿ ಇಂದು ತಮ್ಮ ತವರೂರು ವದ್‍ನಗರ್‍ಗೆ ಭೇಟಿ ನೀಡಿದ್ದು, ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ವಿಧ್ಯುಕ್ತ ಚಾಲನೆ ನೀಡಿ ಗುಜರಾತ್ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ. ವದ್‍ನಗರ್‍ನಲ್ಲಿ ಚಹಾ ಮಾರುತ್ತಿದ್ದ ಸಾಮಾನ್ಯ ಬಾಲಕನೊಬ್ಬ ದೇಶದ ಪ್ರಧಾನಿಯಾಗಿರುವುದಕ್ಕೆ ಆ ನಗರಕ್ಕೆ ಭಾರೀ ಹೆಮ್ಮೆಯಾಗಿದೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ಇಂದು ವದ್‍ನಗರ್ ನವ ವಧುವಿನಂತೆ ಸಿಂಗಾರಗೊಂಡು ಕಂಗೊಳಿಸುತ್ತಿತ್ತು. ಬೆಳಗ್ಗೆ ಈ ನಗರದ ಪ್ರಮುಖ ಬೀದಿಗಳಲ್ಲಿ ರೋಡ್‍ಶೋ ಆರಂಭಿಸಿದ ಮೋದಿಗೆ ಅಪಾರ ಜನಸ್ತೋಮ ಸ್ವಾಗತಿಸಿತು.

Modi  02

ವದ್‍ನಗರ್ ರೈಲು ನಿಲ್ದಾಣದಲ್ಲಿ ಬಾಲ ನರೇಂದ್ರ ಚಹಾ ಮಾರುತ್ತಿದ್ದ ಸಂಗತಿಯಿಂದ ಹಿಡಿದು ಅವರು ಪ್ರಧಾನಿಯಾದ ವಿದ್ಯಮಾನದವರೆಗೂ ಕಥೆ ಹೇಳುವ 50ಕ್ಕೂ ಹೆಚ್ಚು ಬ್ಯಾನರ್‍ಗಳು ಈ ನಗರದಲ್ಲಿ ಗಮನ ಸೆಳೆಯುತ್ತಿವೆ. ಮೋದಿ ಚಹಾ ಮಾರುತ್ತಿದ್ದ ಆಗಿನ ಟೀ ಅಂಗಡಿ ಇದ್ದ ಶಿಥಿಲಾವಸ್ಥೆಯ ಸ್ಥಳವನ್ನು ಮರು ನಿರ್ಮಾಣ ಮಾಡಿ ಅಲ್ಲಿ ನರೇಂದ್ರ ಮೋದಿ ಭಾವಚಿತ್ರ ಹಾಕಲಾಗಿದೆ. ವದ್‍ನಗರದ ಎಲ್ಲೆಡೆ ಮೋದಿ ಭಾವಚಿತ್ರವಿರುವ ಕಟೌಟ್‍ಗಳು, ಬ್ಯಾನರ್‍ಗಳು, ಹೂವಿನ ಅಲಂಕಾರಗಳೊಂದಿಗೆ ಕಂಗೊಳಿಸುತ್ತಿವೆ.

Modi  03

ತಮ್ಮ ಹುಟ್ಟೂರಿಗೆ ಭೇಟಿ ನೀಡಿದ ಸಂಕೇತವಾಗಿ ಪ್ರಧಾನಿ ನರೇಂದ್ರಮೋದಿ 500 ಕೋಟಿ ರೂ. ವೆಚ್ಚದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ತಮ್ಮ ಸರ್ಕಾರದ ಮೂರು ವರ್ಷಗಳ ಸಾಧನೆ ಮತ್ತು ಜನಹಿತಕ್ಕಾಗಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ವಿವರಿಸಿದರು.

Facebook Comments

Sri Raghav

Admin