ತಿರುಪತಿಯಲ್ಲಿ ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ವಿಶೇಷ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

Srtilanka--02

ತಿರುಪತಿ, ಅ.8-ದ್ವೀಪರಾಷ್ಟ್ರ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಇಂದು ವಿಶ್ವವಿಖ್ಯಾತ ತಿರುಪತಿ ಬೆಟ್ಟದಲ್ಲಿ ಶ್ರಿ ವೆಂಕಟೇಶ್ವರನಿಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು. ಶ್ರೀಲಂಕಾ ಅಧ್ಯಕ್ಷರಾಗಿ 2015ರಲ್ಲಿ ಆಯ್ಕೆಯಾದ ಸಿರಿಸೇನಾ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಇದು ಮೂರನೇ ಬಾರಿ.

ಪತ್ನಿ ಜಯಂತಿ ಪುಷ್ಪಾ ಕುಮಾರಿ ಹಾಗೂ ಶ್ರೀಲಂಕಾದ ಉನ್ನತಾಧಿಕಾರಿಗಳೊಂದಿಗೆ ಇಂದು ಮುಂಜಾನೆಯೇ ಶ್ರೀವೆಂಕಟೇಶ್ವರ ಸನ್ನಿಧಾನಕ್ಕೆ ಆಗಮಿಸಿದ ಅಧ್ಯಕ್ಷರು, ದೇವಸ್ಥಾನದಲ್ಲಿ ವೇದ ಉದ್ಘೋಷಕರು ನಡೆಸುವ ಸುಪ್ರಭಾತ ಕಾರ್ಯಕ್ರಮದಲ್ಲಿ ಭಾಗವಹಿಸಿದರು.   ಶ್ರೀಲಂಕಾ ಅಧ್ಯಕ್ಷರ ತಿರುಪತಿ ಭೇಟಿ ಗೌರವಾರ್ಥ ಅವರಿಗೆ ದೇವಸ್ಥಾನ ಮಂಡಳಿ ಪರವಾಗಿ ರೇಷ್ಮೆ ವಸ್ತ್ರ ನೀಡಿ ಗೌರವಿಸಲಾಯಿತು.   ಸಿರಿಸೇನಾ ನಿನ್ನೆ ಬೆಂಗಳೂರು ರಸ್ತೆ ಮಾರ್ಗವಾಗಿ 250 ಕಿ.ಮೀ. ದೂರದ ತಿರುಪತಿಗೆ ಆಗಮಿಸಿದ್ದರು.

Facebook Comments

Sri Raghav

Admin