ಬಂಪರ್ ಆಫರ್ : ವಿಧವೆಯನ್ನು ಮದುವೆಯಾದರೆ ಸಿಗುತ್ತೆ 2 ಲಕ್ಷ ಪ್ರೋತ್ಸಾಹಧನ..!

ಈ ಸುದ್ದಿಯನ್ನು ಶೇರ್ ಮಾಡಿ

Marriage--02

ಭೂಪಾಲ್, ಅ.8- ಮಧ್ಯಪ್ರದೇಶದಲ್ಲಿ ವಿಧವಾ ವಿವಾಹ ಪ್ರೊತ್ಸಾಹಕ್ಕೆ ಸಾಮಾಜಿಕ ನ್ಯಾಯ ಇಲಾಖೆಯು ಹೊಸ ಯೋಜನೆ ಜಾರಿಗೊಳಿಸಿದೆ. 18ರಿಂದ 45ರ ವಿಧವೆಯನ್ನು ಮದುವೆಯಾಗುವ ವರನಿಗೆ ಸರಕಾರದಿಂದ ಎರಡು ಲಕ್ಷ ರೂ. ನೀಡಲಾಗುತ್ತದೆ. ಸರಕಾರದ ಈ ಯೋಜನೆಯಂತೆ ವರ್ಷಕ್ಕೆ 1,000 ವಿಧವಾ ವಿವಾಹ ನಿರೀಕ್ಷಿಸಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಕಳೆದ ಜುಲೈನಲ್ಲಿ ಸುಪ್ರೀಂಕೋರ್ಟ್ ವಿಧವಾ ವಿವಾಹಕ್ಕೆ ಸೂಕ್ತ ಯೋಜನೆ ರೂಪಿಸುವಂತೆ ಕೇಂದ್ರ ಸರಕಾರಕ್ಕೆ ಸಲಹೆ ನೀಡಿತ್ತು.

ಸುಪ್ರೀಂ ಕೋರ್ಟ್‍ನ ಆದೇಶದಿಂದ ಪ್ರೇರಿತವಾಗಿರುವ ಮಧ್ಯಪ್ರದೇಶ ಸರಕಾರ ವಿಧವಾ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ. ಸರಕಾರ ಈ ಯೋಜನೆಗಾಗಿ ಪ್ರತಿ ವರ್ಷ 20 ಕೋಟಿ ರೂ. ಒದಗಿಸಲಿದೆ.

Facebook Comments

Sri Raghav

Admin