ಮನೆಯವರು ಬೇಗ ಮದುವೆ ಮಾಡದಿದ್ದಕ್ಕೆ ಮರವೇರಿ ಕೂತ..!

ಈ ಸುದ್ದಿಯನ್ನು ಶೇರ್ ಮಾಡಿ

Kudligi--02

ಬಳ್ಳಾರಿ, ಅ.8-ಮನೆಯಲ್ಲಿ ಹಿರಿಯರು ತನಗೆ ಮದುವೆ ಮಾಡುವುದು ವಿಳಂಬವಾಗಿದ್ದಕ್ಕೆ ಕೋಪಗೊಂಡ ಯುವಕನೊಬ್ಬ 60 ಅಡಿ ಎತ್ತರದ ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ನಡೆದಿದೆ. 25 ವರ್ಷದ ಯುವಕ ಮದುವೆ ಮಾಡುವಂತೆ ಅಪ್ಪ-ಅಮ್ಮನನ್ನು ಕೇಳುತ್ತಿದ್ದ. ಆದರೆ ಕಾರಣಾಂತರ ಮದುವೆ ವಿಳಂಬವಾಗಿತ್ತು. ಇದರಿಂದ ಬೇಸರಗೊಂಡ ಯುವಕ ಇಂದು ಬೆಳಗ್ಗೆ 60 ಅಡಿ ಎತ್ತರದ ಮರವೇರಿ ತಕ್ಷಣ ಮದುವೆ ಮಾಡದಿದ್ದರೆ ಮರದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಘೋಷಿಸಿದ್ದಾನೆ.

ಇದರಿಂದ ಹೆದರಿದ ಪೋಷಕರು ಕಂಗಾಲಾಗಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.  ಸ್ಥಳಕ್ಕೆ ಧಾವಿಸಿದ ಪೊಲೀಸರು ಮದುವೆ ಮಾಡಿಸುವುದಾಗಿ ಭರವಸೆ ನೀಡಿದ ನಂತರ ಯುವಕ ಮರದಿಂದ ಕೆಳಗಿಳಿದ. ತಂದೆ-ತಾಯಿ ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು. ಕೊಟ್ಟ ಮಾತಿನಂತೆ ಪೊಲೀಸರು ಯುವಕನಿಗೆ ಈ ಕೂಡಲೇ ಮದುವೆ ಮಾಡಿಸಲು ಮುಂದಾಗಿದ್ದಾರೆ.

Facebook Comments

Sri Raghav

Admin