ರಷ್ಯಾ ನಡೆಸಿದ ವಾಯು ದಾಳಿಯಲ್ಲಿ 180 ಐಎಸ್ ಉಗ್ರರು ಫಿನಿಷ್

ಈ ಸುದ್ದಿಯನ್ನು ಶೇರ್ ಮಾಡಿ

ISIS--012

ಮಾಸ್ಕೋ, ಅ.8-ಸಿರಿಯಾದಲ್ಲಿ 24 ಗಂಟೆಗಳಲ್ಲಿ ರಷ್ಯಾ ನಡೆಸಿದ ಸರಣಿ ವಾಯು ದಾಳಿಗಳಲ್ಲಿ 180 ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಈ ವೈಮಾನಿಕ ದಾಳಿಯಲ್ಲಿ ಐಎಸ್‍ನ 120 ಹೋರಾಟಗಾರರು ಹಾಗೂ ಅವರಿಗೆ ಬೆಂಬಲ ನೀಡಿದ್ದ 60 ವಿದೇಶಿ ಬಂಡುಕೋರರೂ ಹತರಾಗಿದ್ದಾರೆ ಎಂದು ಮಾಸ್ಕೋದಲ್ಲಿ ರಕ್ಷಣಾ ಸಚಿವಾಲಯ ತಿಳಿಸಿದೆ. ಮಯದೀನ್ ಪ್ರದೇಶದ ಉತ್ತರ ಕಕಶೀಯನ್ನರ ಒಂಭತ್ತು ಸ್ಥಳಗಳಲ್ಲಿ 80 ಬಂಡುಕೋರರು ಹಾಗೂ ಅಲ್ಬು ಕಮಲ್ ಪಟ್ಟಣದಲ್ಲಿ 40 ಐಎಸ್ ಉಗ್ರರು ಬಲಿಯಾಗಿದ್ದಾರೆ.

ಸಿರಿಯಾ ಡೀರ್ ಎಜೋರ್ ದಕ್ಷಿಣ ಭಾಗದಲ್ಲಿ ನಡೆದ ಯುದ್ಧ ವಿಮಾನಗಳ ಬಾಂಬ್ ದಾಳಿಗಳಲ್ಲಿ ಸೋವಿಯತ್ ಒಕ್ಕೂಟ, ಟುನಿಷಿಯಾ ಮತ್ತು ಈಜಿಪ್ಟ್‍ನ 60ಕ್ಕೂ ಹೆಚ್ಚು ವಿದೇಶಿ ಬೆಂಬಲಿಗರೂ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin