ಸೌದಿ ಅರಮನೆಯಲ್ಲಿ ಇಬ್ಬರು ಗಾರ್ಡ್‍ಗಳನ್ನು ಹತ್ಯೆ ಮಾಡಿ ಗನ್‍ಮ್ಯಾನ್ ಅಟ್ಟಹಾಸ

ಈ ಸುದ್ದಿಯನ್ನು ಶೇರ್ ಮಾಡಿ

Soudi--02

ರಿಯಾದ್, ಅ.8-ಜೆಡ್ಡಾದ ರೆಡ್ ಸೀ ಸಿಟಿಯಲ್ಲಿನ ರಾಯಲ್ ಪ್ಯಾಲೇಸ್ (ಅರಮನೆ) ಪ್ರವೇಶ ಧ್ವಾರದಲ್ಲಿ ಬಂದೂಕುದಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸೌದಿ ಗಾರ್ಡ್‍ಗಳು ಹತರಾಗಿ ಇತರ ಮೂವರು ತೀವ್ರ ಗಾಯಗೊಂಡಿದ್ದಾರೆ. ಭದ್ರತಾ ಪಡೆ ಸಿಬ್ಬಂದಿ ಹಂತಕನ್ನು ಗುಂಡಿಕ್ಕಿ ಕೊಂದಿದ್ದಾರೆ.  ಸೌದಿ ರಾಷ್ಟ್ರೀಯನಾದ 28 ವರ್ಷದ ಯುವಕ ಹ್ಯುಂಡೈ ಕಾರಿನಲ್ಲಿ ರಾಯಲ್ ಪ್ಯಾಲೇಸ್ ಮುಖ್ಯ ದ್ವಾರದ ಬಳಿ ಬಂದು ಎಕೆ-47 ರೈಫಲ್‍ನಿಂದ ಗುಂಡು ಹಾರಿಸಿ ಇಬ್ಬರು ಗಾರ್ಡ್‍ಗಳನ್ನು ಕೊಂದ. ಈ ದಾಳಿಯಲ್ಲಿ ಮೂವರಿಗೆ ತೀವ್ರ ಗಾಯಗಳಾಗಿವೆ.

ಈ ಅನಿರೀಕ್ಷಿತ ದಾಳಿಯಿಂದ ಎಚ್ಚೆತ್ತ ಅರಮನೆ ಭದ್ರತಾ ಸಿಬ್ಬಂದಿ ಪ್ರತಿ ದಾಳಿ ನಡೆಸಿ ಆತನನ್ನು ಹತ್ಯೆ ಮಾಡಿದರು. ಹತನಿಂದ ಕಲಾಶ್ನಿಕೋವ್ ರೈಫಲ್ ಮತ್ತು ಮೂರು ಗ್ರೆನೇಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಹಂತಕನ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಈತ ಉಗ್ರಗಾಮಿಯೇ ಅಥವಾ ಏಕಾಂಗಿ ದಾಳಿಕೋರನೇ ಎಂಬ ಬಗ್ಗೆ ಗೊಂದಲಗಳಿದ್ದು ತನಿಖೆ ನಡೆಯುತ್ತಿದೆ.

Facebook Comments

Sri Raghav

Admin