ಎಫ್‍ಎಸ್‍ಎಲ್ ವರದಿ ಹಿಂದೆ ರಾಜ್ಯಸರ್ಕಾರದ ಷಡ್ಯಂತ್ರ : ಶೆಟ್ಟರ್ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Jagadish-Shettar-01

ಹುಬ್ಬಳ್ಳಿ,ಅ.9- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ ಕುಮಾರ್ ಅವರ ಸಂಭಾಷಣೆವುಳ್ಳ ಸಿಡಿ ಅಸಲಿಯಾಗಿದೆ ಎಂದು ಎಫ್‍ಎಸ್‍ಎಲ್ ವರದಿ ಹಿಂದೆ ರಾಜ್ಯ ಸರ್ಕಾರ ಷಡ್ಯಂತ್ರವಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಪ್ರಕರಣ ಹಿಂದೆ ಮುಖ್ಯ ಮಂತ್ರಿಗಳ ಹುನ್ನಾರ ಎಂದ ಅವರು ಇನ್ನೂ ಎಸಿಬಿಯಲ್ಲಿ ಇದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂದ ಮೇಲೆ 25ಕ್ಕೂ ಹೆಚ್ಚು ಪ್ರಕರಣಗಳಿವೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಡಿಯೂರಪ್ಪ ಅವರ ಮೇಲೆ ಈ ರೀತಿ ಇಲ್ಲಸಲ್ಲದ ಕೇಸ್ ದಾಖಲಿಸಿ ಅವರನ್ನು ಬಂಧಿಸುವ ಷಡ್ಯಂತ್ರ ನಡೆದಿದೆ ಎಂದರು.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ 26 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿದ್ದ ಬಗ್ಗೆ ಆರೋಪವಿದೆ ಎಂದು ಅವರು ತಿಳಿಸಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಡಿ.ಕೆ. ಚಹ್ವಾಣ, ಪಾಲಿಕೆ ಸದಸ್ಯ ವೀರಣ್ಣ ಸವಡಿ, ಹಣಮಂತಪ್ಪ ದೊಡ್ಡಮನಿ ಇತರರಿದ್ದರು.

Facebook Comments

Sri Raghav

Admin