‘ಜೈಲಿಗೆ ಹೋಗಿ ಬಂದಿರುವವರೇ ಪಕ್ಷದ ಅಧ್ಯಕ್ಷರಾಗಿದ್ದಾರೆ’ : ಬಿಎಸ್ವೈಗೆ ಸಿದ್ದರಾಮಯ್ಯ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa---Siddaramaiah-

ಬೆಂಗಳೂರು,ಅ.9- ಅವ್ಯವಹಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಕುಲಪತಿ ಮಹೇಶಪ್ಪ ಅವರನ್ನು ಕೆಪಿಸಿಸಿ ಐಟಿ ಸೆಲ್‍ಗೆ ನೇಮಕ ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಕ್ರಮ ಅವ್ಯವಹಾರ ಮಾಡಿ ಜೈಲಿಗೆ ಹೋಗಿ ಬಂದಿರುವವರೇ ಒಂದು ಪಕ್ಷದ ಅಧ್ಯಕ್ಷರಾಗಿದ್ದಾರೆ ಎಂದು ತಿರುಗೇಟು ನೀಡಿದರು.

ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಅಕ್ರಮಗಳ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಅವರ ಮೇಲೆ ಇನ್ನು ತನಿಖೆ ನಡೆಯುತ್ತಿದೆ. ಅಂಥವರನ್ನೇ ಅವರ ಪಕ್ಷ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ನಿವೃತ್ತ ಕುಲಪತಿಯಾಗಿರುವ ಮಹೇಶಪ್ಪ ಅವರನ್ನು ಐಟಿ ಸೆಲ್‍ಗೆ ನೇಮಕ ಮಾಡಿರುವುದರಲ್ಲಿ ತಪ್ಪೇನಿದೆ ಎಂದು ಹೇಳಿದರು.  ಕಳಂಕಿತರನ್ನು ಪಕ್ಷಕ್ಕೆ ನೇಮಕ ಮಾಡಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದು , ಮೊದಲು ಅವರನ್ನು ಹೋಗಿ ಕೇಳಿ ಎಂದು ಮರುಪ್ರಶ್ನೆ ಹಾಕಿದರು.

Facebook Comments

Sri Raghav

Admin