ದಿನೇಶ್ ಗುಂಡೂರಾವ್‍ಗೆ 48ನೇ ಹುಟ್ಟುಹಬ್ಬದ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Dinesh--02

ಬೆಂಗಳೂರು, ಅ.9- ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ 48ನೆ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಶುಭಾಶಯಗಳ ಸುರಿಮಳೆಗೈದರು. ರಾತ್ರಿಯಿಂದಲೇ ನೆಚ್ಚಿನ ನಾಯಕನಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿತು. ಹುಟ್ಟುಹಬ್ಬದ ಅಂಗವಾಗಿ ಹಲವಾರು ಸಂಘ-ಸಂಸ್ಥೆಗಳು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು.

ಪಾರದರ್ಶಕ, ಪ್ರಾಮಾಣಿಕ, ಸಂಯಮ ರಾಜಕಾರಣಿ, ಅಪಾರ ಜನಾನುರಾಗಿ, ಎಲ್ಲ ವರ್ಗಗಳ ಹಿತಚಿಂತಕರು, ಮಾಜಿ ಸಚಿವರು ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಅವರು ಉತ್ತಮ ಸೇವೆ ಸಲ್ಲಿಸುತ್ತ ಜನಮನ್ನಣೆ ಗಳಿಸಿದ್ದಾರೆ. ಗಾಂಧಿನಗರದ ಪ್ರಮುಖ ರಸ್ತೆಗಳು ಹಾಗೂ ಅವರ ನಿವಾಸದ ರಸ್ತೆಗಳ ಅಕ್ಕಪಕ್ಕ ಶುಭ ಕೋರುವ ಫ್ಲಕ್ಸ್‍ಗಳು, ಬಂಟಿಕ್ಸ್‍ಗಳು ರಾರಾಜಿಸುತ್ತಿದ್ದವು. ಅಭಿಮಾನಿಗಳು, ಕಾರ್ಯಕರ್ತರು, ನೆಚ್ಚಿನ ನಾಯಕನಿಂದ ಕೇಕ್ ಕತ್ತರಿಸಿ ಶುಭ ಕೋರಿದರು.

Facebook Comments

Sri Raghav

Admin