ದೆಹಲಿಯಲ್ಲಿ ಅ.31ರವರೆಗೆ ಪಟಾಕಿ ಮಾರಾಟ ಮಾಡುವಂತಿಲ್ಲ : ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

Firecrack-002

ನವದೆಹಲಿ, ಅ.9-ದೆಹಲಿ-ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ(ಎನ್‍ಸಿಆರ್) ಪಟಾಕಿಗಳ ಮಾರಾಟ ನಿಷೇಧಿಸಿ ತಾನು ಕಳೆದ ನವೆಂಬರ್‍ನಲ್ಲಿ ನೀಡಿದ್ದ ಆದೇಶ ಅಕ್ಟೋಬರ್ 31ರವರೆಗೆ ದುವರಿಯಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದರಿಂದಾಗಿ ದೆಹಲಿ ಈ ಬಾರಿ ದೀಪಾವಳಿ ಪಟಾಕಿ-ಬಾಣಬಿರುಸು ಮತ್ತು ಸಿಡಿಮದ್ದುಗಳ ಸಿಡಿತದ ಸಡಗರ-ಸಂಭ್ರಮದಿಂದ ವಂಚಿತವಾಗಲಿದೆ.

ನ್ಯಾಯಮೂರ್ತಿ ಎ.ಕೆ.ಸಕ್ರಿ ನೇತೃತ್ವದ ಏಕ ಸದಸ್ಯ ಪೀಠ, ಸೆಪ್ಟೆಂಬರ್ 12 ಮತ್ತು ಕಳೆದ ವರ್ಷ ನವೆಂಬರ್ 11ರಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶಗಳನ್ನು ಉಲ್ಲೇಖಿಸಿ ಪಟಾಕಿ ಮಾರಾಟದ ಮೇಲೆ ನಿಷೇಧ ವಿಧಿಸಿದೆ. ದೆಹಲಿ-ಎನ್‍ಸಿಆರ್ ವ್ಯಾಪ್ತಿಯೊಳಗೆ ಅಕ್ಟೋಬರ್ 31ರವರೆಗೆ ಪಟಾಕಿಗಳು ಮತ್ತು ಬಾಣ ಬಿರುಸುಗಳ ಮಾರಾಟ ಅನುಮತಿ, ಸಗಟು ಮತ್ತು ಚಿಲ್ಲರೆ ಮಾರಾಟಕ್ಕೆ ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿದೆ.

ಸೆಪ್ಟೆಂಬರ್ 12ರಂದು ಪಟಾಕಿಗಳ ಮಾರಾಟಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿತ್ತು ಮತ್ತು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿತ್ತು. ಆದರೆ ದೆಹಲಿಯಲ್ಲಿ ಗಂಭೀರ ವಾಯು ಮಾಲಿನ್ಯದಿಂದಾಗಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾರಾಟ ಮತ್ತು ಅವುಗಳನ್ನು ಸಿಡಿಸಲು ಅನುಮತಿ ನೀಡಬಾರದೆಂದು ಕೋರಿ ಸಲ್ಲಿಸಿಲಾಗಿದ್ದ ಮನವಿ ಅರ್ಜಿಗಳನ್ನು ಪರಿಗಣಿಸಿ ಸುಪ್ರೀಂ ಈ ಆದೇಶ ಹೊರಡಿಸಿದೆ. ಇದರಿಂದಾಗಿ ದೆಹಲಿಯಲ್ಲಿ ಬೆಳಕಿನ ಹಬ್ಬ ಈ ಬಾರಿ ಮಂಕಾಗಲಿದೆ.

Facebook Comments

Sri Raghav

Admin