ಬಿಜೆಪಿ ಕಾರ್ಯಕರ್ತರಿಂದ 2000 ರೂ. ನೋಟಿಗೆ ಅವಮಾನ

ಈ ಸುದ್ದಿಯನ್ನು ಶೇರ್ ಮಾಡಿ

200-Note-Modi

ಬೆಂಗಳೂರು,ಅ.9-ಬಿಜೆಪಿ ಕಾರ್ಯಕರ್ತರಿಂದ 2000 ರೂ. ನೋಟಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮೋದಿ ಭಾವಚಿತ್ರ ಇರುವ 2000 ನೋಟಿನ ಮಾದರಿ ನೋಟಿನಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮಾಡಿ ನೋಟಿನ ದುರುಪಯೋಗ ಮಾಡಿದ್ದಾರೆ. ಬೊಮ್ಮನಹಳ್ಳಿ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಈ ಅಚಾತುರ್ಯ ನಡೆದಿದೆ. ನೋಟನ್ನು ಅಗೌರವಿಸುವಂತಿಲ್ಲ ಎಂಬ ಆರ್‍ಬಿಐ ನಿಯಮವಿದ್ದರೂ ಬಿಜೆಪಿ ಕಾರ್ಯಕರ್ತರು ಅದನ್ನು ಉಲ್ಲಂಘಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಹರಿದಾಡುತ್ತಿದೆ. ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು 2000 ರೂ. ನೋಟು ಮಾದರಿಯಲ್ಲಿ ಮಾಡುವ ಮೂಲಕ ಆರ್‍ಬಿಐಗೆ ಅವಮಾನ ಮಾಡಿದ್ದಾರೆ ಎಂದು ಹಲವರು ದೂರಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Facebook Comments

Sri Raghav

Admin