ಸಾಹಿತಿಗಳಷ್ಟೇ ಅಲ್ಲ ಕನ್ನಡ ಹೋರಾಟಗಾರರೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬಹುದು : ಚಂಪಾ

ಈ ಸುದ್ದಿಯನ್ನು ಶೇರ್ ಮಾಡಿ

Kannada--01

ಬೆಂಗಳೂರು, ಅ.9-ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳೇ ಅಧ್ಯಕ್ಷ ರಾಗಬೇಕೆಂಬ ನಿಯಮವೇನಿಲ್ಲ. ಕನ್ನಡಪರ ಹೋರಾಟ ಮಾಡು ವವರೂ ಕೂಡ ಅಧ್ಯಕ್ಷರಾಗಬಹುದು ಎಂದು ಹಿರಿಯ ಸಾಹಿತಿ ಡಾ.ಚಂದ್ರ ಶೇಖರ ಪಾಟೀಲ್ ಹೇಳಿದರು. ನಗರದ ಖಾಸಗಿ ಹೊಟೇಲ್‍ವೊಂದರಲ್ಲಿ ಚಂದ್ರಶೇಖರ್ ಪಾಟೀಲ್ ಅವರಿಗೆ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎಲ್ಲರೂ ಏನು ಮಾಡಬೇಕು ಎಂಬ ಸಮಗ್ರ ಚೌಕಟ್ಟನ್ನು ಒದಗಿಸುವುದು ನನ್ನ ಜವಾಬ್ದಾರಿಯಾಗಿದೆ. ಚಳವಳಿ ಹಾಗೂ ಸಾಹಿತ್ಯಕ್ಕೆ ನೇರವಾದ ನಂಟಿದೆ. ಕೆಲವು ಸಾಹಿತಿಗಳು ಬರೆದರಷ್ಟೇ ನನ್ನ ಕೆಲಸ ಎನ್ನುತ್ತಾರೆ. ಆದರೆ ನಾನು ಅವರನ್ನು ಕನ್ನಡ ಕಳಕಳಿಯ ಬಗ್ಗೆ ಪ್ರಶ್ನಿಸಬೇಕಿದೆ ಎಂದರು.

ಕ್ರಿಯಾಶೀಲರಾಗಿ ಕ್ರಿಯೆ ಮೂಲಕ ಹೋರಾಟ ಮಾಡುವುದು ಒಂದು ದಾರಿ. ಅದಕ್ಕೆ ಮತ್ತೊಂದು ಹೆಸರೇ ವಾಟಾಳ್ ನಾಗರಾಜ್. ಬರಹದ ಮೂಲಕ ನಾವು ಏನು ಮಾಡಬೇಕು ಎಂಬ ದಾರಿಗೆ ಕುವೆಂಪು ಅವರು ಹೆಸರಾಗಿದ್ದಾರೆ. ಕುವೆಂಪು ಅವರ ನಾಡಗೀತೆ ಬರೀ ಹಾಡುವ ಹಾಡಲ್ಲ. ಅದು ನಮ್ಮ ಕರ್ನಾಟಕ ಹೇಗಿರಬೇಕು ಎಂಬುದನ್ನು ವೈಜ್ಞಾನಿಕವಾಗಿ ತಿಳಿಸುವ ರಾಜಕೀಯ ಕವನವಾಗಿದೆ ಎಂದು ಚಂಪಾ ಹೇಳಿದರು. ಬೇರೆ ರಾಜ್ಯಗಳು ನಮ್ಮ ನಾಡಗೀತೆಯನ್ನು ಮಾದರಿ ನಾಡಗೀತೆಯನ್ನಾಗಿ ಸ್ವೀಕರಿಸ ಬಹುದು. ಕರ್ನಾಟಕದಲ್ಲಿ ಯಾವುದೇ ಸರ್ಕಾರ ಬಂದರೂ ಕನ್ನಡ ಸಾಹಿತ್ಯಕ್ಕೆ ಅನುದಾನ ನೀಡುವಲ್ಲಿ ಹಿಂದೇಟು ಹಾಕಿಲ್ಲ, ಅದು ಸಂತೋಷದ ವಿಷಯ ಎಂದು ಅವರು ಸಲಹೆ ನೀಡಿದರು. ಕನ್ನಡದ ಬಗ್ಗೆ ಪ್ರೀತಿ ಇರುವವರು ಚಿಂತನೆ ಮಾಡಿದರೆ ಕನ್ನಡದ ಸಮಸ್ಯೆಗಳನ್ನು ಬಗೆಹರಿಸಲು ಯಾವ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬುದನ್ನು ಮುಕ್ತ ಚಿಂತನೆ ಮಾಡಬಹುದು ಎಂದರು.

 

ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಚಂದ್ರಶೇಖರ ಪಾಟೀಲ್ ಅವರು ಮೈಸೂರಿನಲ್ಲಿ ನಡೆಯುವ 83ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ವಿಷಯವಾಗಿದೆ ಎಂದು ತಿಳಿಸಿದರು. ಕನ್ನಡ ಒಕ್ಕೂಟದ ಶಿವರಾಮೇಗೌಡ, ಅಖಿಲ ಕರ್ನಾಟಕ ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕರವೇ ಅಧ್ಯಕ್ಷ ಪ್ರವೀಣ್‍ಕುಮಾರ್‍ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

Facebook Comments

Sri Raghav

Admin