ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-10-2017)

ನಿತ್ಯ ನೀತಿ : ದೇವಕಿಯನ್ನು ಸಂಹರಿಸಲು ಕತ್ತಿಯನ್ನೆತ್ತಿದ್ದ ಕಂಸನನ್ನು ವಸುದೇವನು ಒಳ್ಳೆಯ ಮಾತು ಗಳಿಂದ ಸಾಂತ್ವನಗೊಳಿಸಿದನು. ಮೂರ್ಖನನ್ನು ಸಾಮದಿಂದ ವಶಪಡಿಸಿಕೊಳ್ಳಬೇಕು. – ಗುಮಾನಿಕವಿಯ ಉಪದೇಶಶತಕ

Rashi

ಪಂಚಾಂಗ : ಮಂಗಳವಾರ , 10.10.2017

ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.06.04
ಚಂದ್ರ ಅಸ್ತ ಬೆ.10.23 / ಚಂದ್ರ ಉದಯ ರಾ.10.17
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು
ಅಶ್ವಯುಜ ಮಾಸ /ಕೃಷ್ಣ ಪಕ್ಷ / ತಿಥಿ : ಪಂಚಮಿ (ಬೆ.11.38)
ನಕ್ಷತ್ರ: ರೋಹಿಣಿ (ಮ.12.09) / ಯೋಗ: ವ್ಯತೀಪಾತ (ಮ.12.35)
ಕರಣ: ತೈತಿಲ-ಗರಜೆ  (ಬೆ.11.38-ರಾ.10.23)

ರಾಶಿ ಭವಿಷ್ಯ :

ಮೇಷ : ತೀರ್ಥಯಾತ್ರೆ ಮಾಡುವಿರಿ, ನೂತನ ವಾಹನ ಖರೀದಿಯೋಗವಿದೆ, ದೂರ ಪ್ರಯಾಣ
ವೃಷಭ : ಹಿಂದೆ ಇದ್ದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ, ಸ್ವಲ್ಪ ಎಚ್ಚರಕೆ ವಹಿಸಿ
ಮಿಥುನ: ಯಾವುದೇ ಅಡೆ-ತಡೆಯಿಲ್ಲದೆ ಪ್ರಗತಿ ಸಾಧಿಸುವಿರಿ, ಮಕ್ಕಳ ಸಾಧನೆಯನ್ನು ಮೆಚ್ಚಿಕೊಳ್ಳಿ
ಕಟಕ : ಗಣ್ಯ ವ್ಯಕ್ತಿಗಳ ಪರಿಚಯದಿಂದ ಘನತೆ, ಗೌರವ, ಪ್ರತಿಷ್ಠೆ ಹೆಚ್ಚಾಗಲಿದೆ
ಸಿಂಹ: ಆತ್ಮೀಯರಂತೆ ನಟಿಸು ವವರ ಬಗ್ಗೆ ಎಚ್ಚರ ವಹಿಸಿ
ಕನ್ಯಾ: ಸರ್ಕಾರಿ ನೌಕರರಿಗೆ ಅಧಿಕಾರಿಗಳಿಂದ ಭಯವಿದೆ
ತುಲಾ: ಆಗಾಗ್ಗೆ ಕಲಹಗಳನ್ನು ಎದುರಿಸಬೇಕಾಗುತ್ತದೆ
ವೃಶ್ಚಿಕ : ಹೆಂಡತಿ-ಮಕ್ಕಳಿಂದ ಸುಖ ಇರುವುದಿಲ್ಲ, ಕಾಲೆಳೆಯುವ ಜನ ಹೆಚ್ಚಾಗಿರುತ್ತಾರೆ
ಧನುಸ್ಸು: ದೊಡ್ಡ ಯೋಜನೆ ಹಮ್ಮಿಕೊಳ್ಳುವ ಮೊದಲು ಕೊಂಚ ಯೋಚಿಸುವುದು ಸೂಕ್ತ
ಮಕರ: ಸ್ವತ್ತುಗಳ ವಿಚಾರ ಮುಂದೂಡುವುದು ಉತ್ತಮ
ಕುಂಭ: ಅಚ್ಚರಿಯ ಸಾಧನೆ ಮಾಡಲಿದ್ದೀರಿ
ಮೀನ: ನಾನಾ ವಸ್ತುಗಳ ಖರೀದಿಗೆ ಧನವ್ಯಯವಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin