ಕನಕಪುರ ಬಸ್ ನಿಲ್ದಾಣದ ಬಳಿ ಹೆಣ್ಣು ಭ್ರೂಣ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Fatus--01

ಕನಕಪುರ, ಅ.10- ಭ್ರೂಣಹತ್ಯೆ ಕಾನೂನು ಬಾಹಿರ ಎಂದು ತಿಳಿದರೂ ಇಲ್ಲಿನ ಕೆಲವು ಲ್ಯಾಬ್‍ಗಳಲ್ಲಿ ಪ್ರಸವ ಪೂರ್ವ ಲಿಂಗಪತ್ತೆ ಹಚ್ಚುವ ಮೊಬೈಲ್ ಸ್ಕ್ಯಾನಿಂಗ್ ಮಿಷನ್‍ಗಳನ್ನಿಟ್ಟುಕೊಂಡಿರುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಇದಕ್ಕೆ ನಿದರ್ಶನವೆಂಬಂತೆ ಇಂದು ಮುಂಜಾನೆ ಹೆಣ್ಣು ಭ್ರೂಣವೊಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದೆ. ಅಕ್ರಮ ಸಂಬಂಧದಿಂದಲೋ ಅಥವಾ ಹೆಣ್ಣು ಎಂಬ ಕಾರಣಕ್ಕೋ ಏನೋ ಗರ್ಭಪಾತ ಮಾಡಲಾಗಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

ಈ ಘಟನೆಗೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕನಕಪುರ ತಾಲೂಕಿನಾದ್ಯಂತ ಇರುವ ಕೆಲವು ಲ್ಯಾಬ್‍ಗಳು ಹಾಗೂ ಕ್ಲಿನಿಕ್‍ಗಳಲ್ಲಿ ಲಿಂಗಪತ್ತೆ ಮಿಷನ್‍ಗಳನ್ನು ಇಟ್ಟುಕೊಳ್ಳಲಾಗಿದೆ ಎಂಬ ಆರೋಪ ಸಹ ಕೇಳಿಬಂದಿದೆ.  ಇಂದು ಮುಂಜಾನೆ ಆಟೋದಲ್ಲಿ ಬಂದ ವ್ಯಕ್ತಿ ಹೆಣ್ಣು ಭ್ರೂಣವನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ಈ ಮಾರ್ಗದಲ್ಲಿ ಹೋಗುತ್ತಿದ್ದ ಸ್ಥಳೀಯರು ಭ್ರೂಣವನ್ನು ಕಂಡು ಕನಕಪುರ ಟೌನ್ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ನಂತರ ಭ್ರೂಣವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಈ ಸಂಬಂಧ 318 ಕಲಂ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಗ್ಯ ಅಧಿಕಾರಿಗಳು ಆರೋಪಿಗಳನ್ನು ಪತ್ತೆ ಹಚ್ಚಿದ್ದಲ್ಲಿ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಾಗುತ್ತದೆ. ಭ್ರೂಣಹತ್ಯೆ ಕಾನೂನು ಬಾಹಿರವಾಗಿದ್ದರೂ ಇಂತಹ ಕೃತ್ಯದಲ್ಲಿ ತೊಡಗಿದ್ದವರಿಗೆ ಹಾಗೂ ಇದಕ್ಕೆ ಸಹಕರಿಸಿದ ಇಬ್ಬರಿಗೂ ಶಿಕ್ಷೆಯಾಗುವ ಸಾಧ್ಯತೆ ಇದೆ.

Facebook Comments

Sri Raghav

Admin