ನಕಲಿ ನೋಟು ಭಯೋತ್ಪಾದನೆಗೆ ಆಮ್ಲಜನಕವಿದ್ದಂತೆ : ರಾಜನಾಥ್‍ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Rajnath-Singh--01

ನವದೆಹಲಿ, ಅ.10- ನಕಲಿ ನೋಟುಗಳು ಭಯೋತ್ಪಾದನೆಗೆ ಆಮ್ಲಜನಕದ ರೀತಿ ಕಾರ್ಯ ನಿರ್ವಹಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‍ಐಎ) ನೂತನ ಕೇಂದ್ರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ತನ್ನ ನೆಲದಲ್ಲಿ ಭಯೋತ್ಪಾದನೆ ವೃದ್ಧಿಯಾಗುವುದನ್ನು ಯಾವುದೇ ನಾಗರಿಕ ದೇಶ ಒಪ್ಪುವುದಿಲ್ಲ ಎಂದರು.

ಭಯೋತ್ಪಾದನೆಯು ಒಂದು ಶಾಪ ಎಂದು ಬಣ್ಣಿಸಿದ ಗೃಹ ಸಚಿವರು, ಯಾವ ನಾಗರಿಕ ರಾಷ್ಟ್ರವು ಅದನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದರು. ನಕಲಿ ನೋಟುಗಳು ಭಯೋತ್ಪಾದನೆ ಬೆಳೆಯಲು ಕೊಡುಗೆ ನೀಡುತ್ತವೆ. ಉನ್ನತ ಗುಣಮಟ್ಟದ ನಕಲಿ ಕರೆನ್ಸಿಗಳು ಭಯೋತ್ಪಾದನೆಗೆ ಒಂದು ರೀತಿ ಆಮ್ಲಜನಕದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಗೃಹ ಸಚಿವರು ಆತಂಕ ವ್ಯಕ್ತಪಡಿಸಿದರು.

Facebook Comments

Sri Raghav

Admin