ಪೊಲೀಸ್ ಪೇದೆ ಪತ್ನಿಯ ಸರವನ್ನೇ ಎಗರಿಸಿದ ಕಳ್ಳ

ಈ ಸುದ್ದಿಯನ್ನು ಶೇರ್ ಮಾಡಿ

Chain

ದಾವಣಗೆರೆ,ಅ.10- ಪೊಲೀಸ್ ಸಿಬ್ಬಂದಿಯೊಬ್ಬರ ಪತ್ನಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಆಕೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸರ ಕೀಳುವ ಬರದಲ್ಲಿ ಅರ್ಧ ಮಾತ್ರ ಕಳ್ಳರ ಕೈಗೆ ಬಂದಿದ್ದು, ಇನ್ನರ್ಧ ಉಳಿದುಕೊಂಡಿದೆ. ಒಟ್ಟು ನಾಲ್ಕು ತೊಲದ ಸರದಲ್ಲಿ ಎರಡು ತೊಲ ಕಳ್ಳರ ಪಾಲಾಗಿದೆ. ಪೊಲೀಸ್ ಪೇದೆ ನಾಗನಗೌಡ ಅವರ ಪತ್ನಿ ಸ್ವಪ್ನ ಎಂಬುವವರು ಶಾಲೆಗೆ ಮಗುವನ್ನು ಕರೆತರಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin