ಲಿಂಗ ಪರಿವರ್ತನೆ ಮಾಡಿಕೊಂಡ ನಾವಿಕ ಭಾರತೀಯ ನೌಕಾಪಡೆಯಿಂದ ಕಿಕ್‍ಔಟ್

ಈ ಸುದ್ದಿಯನ್ನು ಶೇರ್ ಮಾಡಿ

ZSailoar--01

ನವದೆಹಲಿ, ಅ.10-ಇದು ಭಾರತೀಯ ನೌಕಾ ಪಡೆಗೆ ಮುಜುಗರ ತಂದಿರುವ ಪ್ರಕರಣ ಇದಾಗಿದೆ. ಲಿಂಗ ಪರಿವರ್ತನೆಗೆ ಒಳಗಾಗಿದ್ದ ಭಾರತೀಯ ನೌಕಾ ಪಡೆಯ ನಾವಿಕ ಮನೀಶ್ ಗಿರಿ ಎಂಬಾತನನ್ನು ಸೇವೆಯಿಂದ ಕಿಕ್‍ಔಟ್ ಮಾಡಲಾಗಿದೆ. ನೌಕಾ ಪಡೆಯ ನಿಯಮಗಳ ಪ್ರಕಾರ ಈತ/ಈಕೆಯ ಸೇವೆ ಅಗತ್ಯವಿಲ್ಲ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.  ರಜೆ ಮೇಲೆ ತೆರಳಿದ್ದ ಮನೀಶ್ ಗಿರಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾದ. ಈತ ಸೇವೆಗೆ ಹಿಂದಿರುಗಿದಾಗ ಈತನಲ್ಲಿ ಕಂಡು ಬಂದ ಬದಲಾವಣೆ ಮತ್ತು ಸ್ತ್ರೀವರ್ತನೆಯನ್ನು ಕಂಡು ಗಿರಿಯನ್ನು ಕರ್ತವ್ಯದಿಮದ ಆಡಳಿತಾತ್ಮಕವಾಗಿ ಕೈಬಿಡಲಾಗಿದೆ ಎಂದು ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

ನೌಕಾಪಡಯ ನಾವಿಕನಾಗಿದ್ದ ಗಿರಿ, ವಿಶಾಖಪಟ್ಟಣಂನ ಐಎನ್‍ಎಸ್ ಎಕ್ಸಿಲಾ ಬೇಸ್‍ನಲ್ಲಿ ಕರ್ತವ್ಯದಲ್ಲಿದ್ದ. ಆದರೆ ರಜೆ ಮೇಲೆ ತೆರಳಿದಾಗ ಲಿಂಗ ಪರಿವರ್ತನೆ ಶಸ್ತ್ರಕ್ರಿಯೆಗೆ ಮಾಡಿಸಿಕೊಂಡು ಹುಡುಗಿಯಾಗಿದ್ದ.  ಲಿಂಗ ಪರಿವರ್ತನೆಗೆ ಮುನ್ನವೇ ಈತ ಕರ್ತವ್ಯದಲ್ಲಿದ್ದಾಗಲೇ ಸೀರೆಯುಡಲು ಹಾಗೂ ಕೂದಲನ್ನು ಉದ್ದವಾಗಿ ಬೆಳೆಸಲು ಆರಂಭಿಸಿದ್ದ. ಅಲ್ಲದೇ ತನ್ನ ಹೆಸರನ್ನು ಸಬಿ ಎಂಬು ಬದಲಿಸಿಕೊಂಡಿದ್ದ. ಈತ ವರ್ತನೆ ಬಗ್ಗೆ ಹಿರಿಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ರಜೆ ಮೇಲೆ ತೆರಳಿದ ನಂತರ ಈತ ಸರಿಹೋಗಬಹುದು ಎಂದು ಭಾವಿಸಿದ್ದರು. ಆದರೆ ಗಂಡು ಹೆಣ್ಣಾದ ಪ್ರಸಂಗ ನೌಕಾಪಡೆಗೆ ಇರಿಸುಮುರಿಸು ತಂದಿತ್ತು. ಈ ಕಾರಣದಿಂದ ಆತನನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.

Facebook Comments

Sri Raghav

Admin