2ನೇ ಟಿ20 : ಮುಗ್ಗರಿಸಿದ ಭಾರತ, ಆಸ್ಟ್ರೇಲಿಯಾಗೆ 8 ವಿಕೆಟ್ ಗಳ ಜಯ

ಈ ಸುದ್ದಿಯನ್ನು ಶೇರ್ ಮಾಡಿ

Untitled-2

ಗುವಾಹತಿ. ಅ.10 : ಗುವಾಹತಿಯಲ್ಲಿ ಇಂದು ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧದ ಆಸ್ಟ್ರೇಲಿಯಾ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಭಾರತ ನೀಡಿದ್ದ 119 ರನ್ ಗಳ ಅಲ್ಪಗುರಿಯನ್ನು ಆಸ್ಟ್ರೇಲಿಯಾ ತಂಡ ಕೇವಲ 2 ವಿಕೆಟ್ ನಷ್ಟಕ್ಕೆ 15.3 ನೇ ಓವರ್ ನಲ್ಲಿ ಇನ್ನೂ ಭರ್ಜರಿ ಜಯ ಸಾಧಿಸಿತು. ಭಾರತದ ಸೋಲಿಗೆ ಬ್ಯಾಟ್ಸ್ ಮೆನ್ ಗಳ ವೈಫಲ್ಯವೆ ಕಾರಣವಾಯಿತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ 40 ರನ್ ಆಗುವಷ್ಟರಲ್ಲೇ ಮೊದಲ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿದೆ.
ರೋಹಿತ್ ಶರ್ಮ 8 ರನ್, ಶಿಖರ್ ಧವನ್ 2 , ವಿರಾಟ್ ಕೊಹ್ಲಿ 0, ಮನೀಶ್ ಪಾಂಡೆ 6 ರನ್ ಗಳಿಸಿ ಔಟಾದರು. ಕೇದಾರ್ ಜಾದವ್ 27, ಎಂಎಸ್ ಧೋನಿ 13, ಹಾರ್ದಿಕ್ ಪಾಂಡ್ಯಾ 25 ರನ್ ಗಳಿಸಿದರು. ವೇಗಿ ಜಾಸನ್ ಬೆಹ್ರೆನ್ ಡೊರ್ಫ್ 4 ವಿಕೆಟ್ ಗಳನ್ನು ಗಳಿಸಿದ್ದು ವಿಶೇಷ. ಅಂತಿಮವಾಗಿ ಟೀಂ ಇಂಡಿಯಾ 118 ರನ್ ಗಳಿಗೆ ಸರ್ವಪತನಗೊಂಡಿತ್ತು.

ಟೀಂ ಭಾರತದ ಪರ ಭುವನೇಶ್ವರ್ ಕುಮಾರ್ 1, ಕುಲದೀಪ್ ಯಾದವ್ 16, ಜಸ್ ಪ್ರೀತ್ ಬೂಮ್ರಾ 7 ಹಾಗೂ ಚಹಾಲ್ ಅಜೇಯ 3 ರನ್ ಗಳಿಸಿದ್ದಾರೆ.

ಸ್ಕೋರ್ :

IND 118 (20.0 Ovs)
AUS 122/2 (15.3 Ovs)

Facebook Comments

Sri Raghav

Admin