ಅಪಘಾತಗಳಿಗೆಲ್ಲ ಗುಂಡಿಗಳೇ ಕಾರಣ ಅಲ್ಲ : ಜಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ

KJ-jeorge--02

ಬೆಂಗಳೂರು,ಅ.11-ಬೆಂಗಳೂರಿನಲ್ಲಿ ನಡೆಯುವ ಎಲ್ಲಾ ಅಪಘಾತಗಳಿಗೂ ರಸ್ತೆಯಲ್ಲಿರುವ ಗುಂಡಿಗಳೇ ಹೊಣೆ ಅಲ್ಲ. ಮಾಧ್ಯಮಗಳು ಅಪಪ್ರಚಾರ ಮಾಡುವುದನ್ನು ನಿಲ್ಲಿಸಲಿ ಎಂದು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸಲಹೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ಪೂರ್ವನಿರ್ಧಾರಿತವಾದಂತಿವೆ. ಎಲ್ಲಾ ಅಪಘಾತ, ಸಾವುಗಳಿಗೆ ರಸ್ತೆ ಗುಂಡಿಗಳು ಕಾರಣವೆಂಬಂತೆ ಮಾತನಾಡುತ್ತಿವೆ. ಇಂದು ಬೆಳಗ್ಗೆ ಒಂದು ಅಪಘಾವಾಗಿದೆ. ಅಪಘಾತ ಹೇಗೆ ನಡೆಯುತು ಎಂದು ನಾನು ಅಲ್ಲಿನ ಡಿಸಿಪಿಯವರ ಬಳಿ ವಿಚಾರಿಸಿದ್ದೇನೆ. ಸುತ್ತಮುತ್ತ ಗುಂಡಿಗಳು ಇರಲಿಲ್ಲ.

ಅಪಘಾತವಾಗಿದೆ.ದುರಂತ ದುರಂತಗಳೇ. ಆದರೆ, ಎಲ್ಲಾ ಅಪಘಾತಗಳಿಗೂ ರಸ್ತೆ ಗುಂಡಿಗಳೇ ಎಂದು ಪ್ರಚಾರ ಮಾಡಿ ಬೆಂಗಳೂರಿಗೆ ಕೆಟ್ಟ ಹೆಸರು ತರಬೇಡಿ ಎಂದು ಮನವಿ ಮಾಡಿದರು. ರಸ್ತೆಗಳು ಸರಿಯಿಲ್ಲ. ಗುಂಡಿಗಳು ಇವೆ ಎಂಬುದು ನಿಜ. ಕಳೆದ 10 ವರ್ಷಕ್ಕಿಂತಲೂ ಈ ವರ್ಷ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಅನಿರೀಕ್ಷಿತ ಮಳೆಯಿಂದ ರಸ್ತೆಗಳು ಹಾಳಾಗಿವೆ. ಗುಂಡಿಗಳನ್ನು ಮುಚ್ಚಲು ಮುಖ್ಯಮಂತ್ರಿಗಳು 15 ದಿನ ಕಾಲಾವಕಾಶ ನೀಡಿದ್ದಾರೆ. ಹಾಟ್‍ಮಿಕ್ಸ್ ಬಳಸಿ ಗುಂಡಿ ಮುಚ್ಚಿದರೆ ಕನಿಷ್ಠ ಒಂದೆರಡು ವರ್ಷ ರಸ್ತೆಗಳು ಚೆನ್ನಾಗಿರುತ್ತವೆ. ಮಳೆಗಾಲದಲ್ಲಿ ಹಾಟ್‍ಮಿಕ್ಸ್ ಬಳಸಲು ಸಾಧ್ಯವಾಗುತ್ತಿಲ್ಲ. ಕೋಲ್ಡ್ ಮಿಕ್ಸ್ ಬಳಸಿದಿರೆ ಮೂರ್ನಾಲ್ಕು ತಿಂಗಳಲ್ಲಿ ಮತ್ತೆ ಹದಗೆಡುತ್ತವೆ. ಮುಖ್ಯಮಂತ್ರಿಗಳು ಸೂಚಿಸಿರುವುದರಿಂದ ಗೋಲ್ಡ್ ಮಿಕ್ಸನ್ನಾದರೂ ಬಳಸಿ ಗುಂಡಿಗಳನ್ನು ಮುಚ್ಚುತ್ತೇವೆ ಎಂದರು.

ಬೆಂಗಳೂರಿನ ಎಲ್ಲಾ ರಸ್ತೆಗಳನ್ನು ಸುಧಾರಣೆ ಮಾಡಲು ಈಗಾಗಲೇ ವರ್ಕ್ ಆರ್ಡರ್ ನೀಡಲಾಗಿದೆ. ಇನ್ನೂ ಮೂರ್ನಾಲ್ಕು ತಿಂಗಳ ನಂತರ ಎಲ್ಲಾ ಕೆಲಸಗಳು ಪೂರ್ಣಗೊಂಡು ಉತ್ತಮ ರಸ್ತೆಗಳು ಇರುತ್ತವೆ ಎಂದು ತಿಳಿಸಿದರು. ಮತ್ತೆ ಪ್ರಶ್ನೆಗಳು ಎದುರಾದಾಗ, ಮಳೆ ತಡೆಯುವುದು ನಮ್ಮ ಕೈಯಲ್ಲಿಲ್ಲ. ಸುರಿಯುವ ಮಳೆಗೆ ನಾನು ಕೊಡೆ ಹಿಡಿಯಲು ಸಾಧ್ಯವೆ ಎಂದು ಮರು ಪ್ರಶ್ನಿಸಿದರು.

Facebook Comments

Sri Raghav

Admin