ಎಣ್ಣೆ ಹೊಡೆಸಿ ಯುವಕನನ್ನು ಹತ್ಯೆ ಮಾಡಿದ್ದ ಹಂತಕರು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

killers
ಬೆಂಗಳೂರು, ಅ.11- ಪಾಳು ಮನೆಯೊಂದರಲ್ಲಿ ಯುವಕನಿಗೆ ಮದ್ಯಪಾನ ಮಾಡಿಸಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಮೂವರು ಆರೋಪಿ ಗಳನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತೌಸಿಫ್ ಉಲ್ಲಾ ಷರೀಫ್, ರಘು ಮತ್ತು ಶಿವಕುಮಾರ್ ಬಂಧಿತ ಕೊಲೆ ಆರೋಪಿಗಳು. ಅ.8ರಂದು ಬೆಳಗಿನ ಜಾವ 1 ಗಂಟೆ ಸಮಯದಲ್ಲಿ ಸುರೇಶ್‍ಕುಮಾರ್ (25) ಎಂಬಾತನನ್ನು ಪುಸಲಾಯಿಸಿ ಶಾಮಣ್ಣ ಗಾರ್ಡನ್ ಬಳಿ ಇರುವ ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ತೋಟದ ಪಾಳು ಮನೆಯೊಂದಕ್ಕೆ ಕರೆದೊಯ್ದು ಮದ್ಯಪಾನ ಮಾಡಿಸಿ ಕೊಲೆ ಮಾಡುವ ದುರುದ್ದೇಶದಿಂದ ಬಿಯರ್ ಬಾಟಲ್‍ನಿಂದ ಆತನ ಎಡ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿದ್ದ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಿನಾಯಕನಗರ ಫಾರೆಸ್ಟ್ ಒಳ ಭಾಗದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin