ನಕಲಿ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ವಂಚಕ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Crime-Bangalore

ಬೆಂಗಳೂರು,ಅ.11 – ನಕಲಿ ನೋಟುಗಳನ್ನು ಅಸಲಿ ನೋಟುಗಳೆಂದು ನಂಬಿಸಿ ಸಾರ್ವಜನಿಕರಿಗೆ ಚಲಾವಣೆ ಮಾಡಲು ಯತ್ನಿಸುತ್ತಿದ್ದ ವಂಚಕನನ್ನು ಸಿಸಿಬಿ ಪೊಲೀಸರು ಬಂಧಿಸಿ 83,500 ರೂ.ನಕಲಿ ನೋಟುಗಳು ಹಾಗೂ ಮಾರುತಿ ವ್ಯಾನ್‍ನನ್ನು ವಶ ಪಡಿಸಿಕೊಂಡಿದ್ದಾರೆ.. ಕಮರ್ಷಿಯಲ್ ಸ್ಟ್ರೀಟ್ ವ್ಯಾಪ್ತಿಯ ಮೊದಲಿಯಾರ್ ಸ್ಟ್ರೀಟ್ ಬದಿಯಲ್ಲಿ ಭಾಸ್ಕರ್ ಎಂಬ ವಂಚಕ ಬಿಳಿ ಬಣ್ಣದ ಮಾರುತಿ ವ್ಯಾನ್ ವಾಹನದಲ್ಲಿ ಕುಳಿತು ನಕಲಿ ನೋಟುಗಳನ್ನು ಅಸಲಿ ನೋಟುಗಳೆಂದು ಸಾರ್ವಜನಿಕರನ್ನು ನಂಬಿಸಿ ಚಲಾವಣೆಗೆ ಯತ್ನಿಸುತ್ತಿದ್ದನು.

ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ತೆರಳಿ ವಂಚಕನನ್ನು ಬಂಧಿಸಿ 2000ರೂ. ಮುಖಬೆಲೆಯ 37 ನಕಲಿ ನೋಟುಗಳು, 500 ರೂ. ಮುಖಬೆಲೆಯ 19 ನಕಲಿ ನೋಟುಗಳು ಹಾಗೂ ಮಾರುತಿ ವ್ಯಾನ್‍ನನ್ನು ವಶಪಡಿಸಿಕೊಂಡಿದ್ದಾರೆ. ವಂಚಕನ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin