ಬಿಹಾರದಲ್ಲಿ ರಣವೀರ್ ಸೇನೆಯ ನಾಯಕ ಸೇರಿ ಮೂವರ ಕಗ್ಗೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Ranavir--v01

ಸಸರಾಂ(ಬಿಹಾರ), ಅ.11-ಅಪರಿಚಿತ ಹಂತಕರು ಜಮೀನ್ದಾರರ ನಿಷೇಧಿತ ಖಾಸಗಿ ಸೇನಾಪಡೆ ರಣವೀರ್ ಸೇನೆಯ ಮುಖಂಡ ಸೇರಿದಂತೆ ಮೂವರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಿಹಾರದ ರೋತಾಸ್ ಜಿಲ್ಲೆಯ ದುರ್ಗಾಪುರ್ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.  ರಣವೀರ್ ಸೇನೆಯ ಏರಿಯಾ ಮಾಜಿ ಕಮಾಂಡರ್ ಧನ್‍ಜಿ ಸಿಂಗ್, ಅವರ ಚಾಲಕ ಶಶಿ ಪಾಂಡೆ ಮತ್ತು ಅಂಗರಕ್ಷಕನನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದಾರೆ.

ನಿನ್ನೆ ಮಧ್ಯರಾತ್ರಿ ಈ ಮೂವರು ಕಾರಿನಲ್ಲಿ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅಲೋಕ್ ರಂಜನ್ ತಿಳಿಸಿದ್ದಾರೆ. ಈ ಕಗ್ಗೊಲೆಗಳ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮೂಂದುವರಿದಿದೆ. ಹಂತಕರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Facebook Comments

Sri Raghav

Admin