ಬೆಂಗಳೂರು ದಕ್ಷಿಣ ವಿಭಾಗ ಪೋಲೀಸರ ಭರ್ಜರಿ ಕಾರ್ಯಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

south-police
ಬೆಂಗಳೂರು,ಅ.11-ನಗರದ ದಕ್ಷಿಣ ವಿಭಾಗದ ಪೋಲೀಸರು 49 ಪ್ರಕರಣಗಳಿಗೆ ಸಂಬಂಧಿಸಿದಂತೆ 30 ಮಂದಿ ಆರೋಪಿಗಳನ್ನು ಬಂಧಿಸಿ 1.24 ಕೋಟಿ ಬೆಲೆಬಾಳುವ ಚಿನ್ನ, ಬೆಳ್ಳಿ, ದ್ವಿಚಕ್ರ ವಾಹನ, ರಕ್ತಚಂದನ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಂದ 1.347 ಕೆಜಿ ಚಿನ್ನದ ಆಭರಣ, 25 ಕೆಜಿ ಬೆಳ್ಳಿ ವಸ್ತುಗಳು, ಮೂರು ಆರು ಚಕ್ರದ ವಾಹನಗಳು, 2 ನಾಲ್ಕು ಚಕ್ರದ ವಾಹನಗಳು, 14 ಬೈಕ್‍ಗಳು ಹಾಗೂ 429 ಕೆಜಿ ರಕ್ತಚಂದನ ವಶಪಡಿಸಿಕೊಂಡಿದ್ದಾರೆ.

ಕುಮಾರಸ್ವಾಮಿ ಲೇಔಟ್ :  ಮನೆಗಳ್ಳತನ, ರಾಬರಿ, ಬೈಕ್ ಕಳ್ಳತನ ಮಾಡುತ್ತಿದ್ದ 10 ಮಂದಿಯನ್ನು ಕುಮಾರಸ್ವಾಮಿ ಠಾಣೆ ಪೊಲೀಸರು ಬಂಧಿಸಿ 7.5 ಕೆಜಿ ಬೆಳ್ಳಿ ವಸ್ತುಗಳು, 3 ಮೊಬೈಲ್‍ಗಳು, ವಾಚ್, ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಜೆ.ಪಿ.ನಗರ :  ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ದರೋಡೆಕೋರರನ್ನು ಬಂಧಿಸಿರುವ ಪೊಲೀಸರು 14 ಪ್ರಕರಣಗಳನ್ನು ಪತ್ತೆ ಹಚ್ಚಿ 27 ಮೊಬೈಲ್, ಲ್ಯಾಪ್‍ಟಾಪ್, 3 ಬೈಕ್‍ಗಳು, ಮಾರಕಾಸ್ತ್ರಗಳು ವಶಪಡಿಸಿಕೊಂಡಿದ್ದು, ಒಟ್ಟು ಮೌಲ್ಯ 4.5 ಲಕ್ಷ ಎಂದು ಅಂದಾಜಿಸಲಾಗಿದೆ.
ವಿ.ವಿ.ಪುರಂ: ದ್ವಿಚಕ್ರ ವಾಹನ ಹಾಗೂ ಕ್ಯಾಂಟರ್‍ಗಳು, ರಕ್ತಚಂದನವನ್ನು ಕಳ್ಳತನ ಮಾಡಿ ಸಾಗಣೆ ಮಾಡುತ್ತಿದ್ದ ಮೂವರನ್ನು ಬಂಧಿಸಿ 12.49 ಲಕ್ಷ ರೂ. ಬೆಲೆಬಾಳುವ ಬೈಕ್, 3 ಕ್ಯಾಂಟರ್, 8.58ಲಕ್ಷ ಬೆಲೆಬಾಳುವ 429 ಕೆಜಿ ರಕ್ತಚಂದನ, 60 ಸಾವಿರ ಮೌಲ್ಯದ ಬೈಕ್ ವಶಪಡಿಸಿಕೊಂಡಿದ್ದಾರೆ.

ಕೋಣನಕುಂಟೆ: ಕನ್ನಕಳವು ಮಾಡುತ್ತಿದ್ದ ಆರೋಪಿ ಯೊಬ್ಬನನ್ನು ಕೋಣನಕುಂಟೆ ಪೊಲೀಸರು ಬಂಧಿಸಿ 4ಲಕ್ಷ ರೂ.ಬೆಲೆಬಾಳುವ 152 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು, ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿದ್ದಾರೆ.

ಹನುಮಂತನಗರ:  ಈ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿ 5 ಪ್ರಕರಣಗಳನ್ನು ಪತ್ತೆ ಹಚ್ಚಿ 7.70ಲಕ್ಷ ರೂ. ಬೆಲೆಬಾಳುವ 275 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಸಿ.ಕೆ.ಅಚ್ಚುಕಟ್ಟು:  ಮೋಜಿನ ಜೀವನಕ್ಕಾಗಿ ರಾಬರಿ, ಮನೆಗಳ್ಳತನ, ಯುಪಿಎಸ್ ಬ್ಯಾಟರಿ ಕಳ್ಳತನ ಮಾಡುತ್ತಿದ್ದ 7 ಮಂದಿಯನ್ನು ಬಂಧಿಸಿರುವ ಪೊಲೀಸರು ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ 5.40ಲಕ್ಷ ರೂ. ಬೆಲೆಬಾಳುವ 180 ಗ್ರಾಂ ಚಿನ್ನಾಭರಣ, 250 ಬೆಳ್ಳಿ ವಸ್ತುಗಳು ಹಾಗೂ 3 ಎಕ್ಸೆಲ್ ಕಂಪೆನಿಯ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.

Facebook Comments

Sri Raghav

Admin