2022ರೊಳಗೆ ಬಡತನ ಸಂಪೂರ್ಣ ನಿರ್ಮೂಲನೆ ಮಾಡುವುದು ಮೋದಿ ಸರ್ಕಾರದ ಗುರಿ

ಈ ಸುದ್ದಿಯನ್ನು ಶೇರ್ ಮಾಡಿ

Modfi--01212

ನವದೆಹಲಿ, ಅ.11-ಮುಂದಿನ ಐದು ವರ್ಷಗಳೊಳಗೆ ಭಾರತದಲ್ಲಿ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ತಮ್ಮ ಸರ್ಕಾರ ಮಹತ್ವದ ಗುರಿ ಹೊಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ರಾಜಧಾನಿ ದೆಹಲಿಯ ಪುಸಾದಲ್ಲಿನ ಎಐಆರ್‍ಐನಲ್ಲಿ ಸಮಾಜಸೇವಕ ಮತ್ತು ಗ್ರಾಮಾಭಿವೃದ್ದಿಯ ಹರಿಕಾರ ನಾನಾಜಿ ದೇಶ್‍ಮುಖ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಾನಾಜಿ ದೇಶ್‍ಮುಖ್ ಮತ್ತು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರಿಗೆ ಪುಷ್ಪ ನಮನ ಸಲ್ಲಿಸಿ ಗರೀಭಿ ಭಾರತ್ ಛೋಡೋ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ದೇಶದ ಬೆನ್ನೆಲುಬಾದ ಗ್ರಾಮಗಳಲ್ಲಿ ಮಹತ್ವದ ಪರಿವರ್ತನೆಗೆ ನಾವು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ಮಹತ್ವಾಕಾಂಕ್ಷಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಅವರು ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪಾಲುದಾರಿಕೆ ಬಹು ಮುಖ್ಯ. ಕೇವಲ ಮತದಾನದಿಂದ ಜನತಂತ್ರ ಯಶಸ್ವಿಯಾಗುವುದಿಲ್ಲ ಎಂದು ಅವರು ತಿಳಿಸಿದರು. ಜಾತಿವಾದದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂಥ ವಿಷಬೀಜ ಮೊಳೆಕೆಯೊಡೆದು ಹೆಮ್ಮರವಾಗಲು ಬಿಡಬಾರದು. ಜಾತಿವಾದ ನಿರ್ಮೂಲನೆಯಾಗಬೇಕು ಎಂದು ಅವರು ಕರೆ ನೀಡಿದರು.ಇದೇ ಸಂದರ್ಭದಲ್ಲಿ ಅವರು ತಂತ್ರಜ್ಞಾನ ಮತ್ತು ಗ್ರಾಮೀಣ ಜೀವನ ಧ್ಯೇಯವಾಕ್ಯದ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಗ್ರಾಮೀಣಾಭಿವೃದ್ದಿಗೆ ನೆರವಾಗುವ ಆಪ್ ಗಳಿಗೆ ಚಾಲನೆ ನೀಡಿದರು.

Facebook Comments

Sri Raghav

Admin