ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-10-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಎಲ್ಲಿ ವೃದ್ಧರಿಲ್ಲವೋ ಅದು ಸಭೆಯಲ್ಲ. ಯಾರು ಧರ್ಮವನ್ನು ನುಡಿಯುವುದಿಲ್ಲವೋ ಅವರು ವೃದ್ಧರಲ್ಲ. ಎಲ್ಲಿ ಸತ್ಯವಿಲ್ಲವೋ ಅದು ಧರ್ಮವಲ್ಲ. ಯಾವುದು ಹಟದಿಂದ ಕೂಡಿದ್ದೋ ಅದು ಸತ್ಯವಲ್ಲ. – ಮಹಾಭಾರತ, ಉದ್ಯೋಗ

Rashi

ಪಂಚಾಂಗ : ಗುರುವಾರ, 12.10.2017

ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.06.03
ಚಂದ್ರ ಅಸ್ತ ಮ.12.22 / ಚಂದ್ರ ಉದಯ ರಾ.12.14
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು
ಅಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ : ಸಪ್ತ-ಅಷ್ಟಮಿ (ಬೆ.06.56-ರಾ.05.00)
ನಕ್ಷತ್ರ: ಆರಿದ್ರಾ (ರಾ.08.57) / ಯೋಗ: ಪರಿಘ-ಶಿವ (ಬೆ.06.28-ರಾ.03.45)
ಕರಣ: ಭವ-ಬಾಲವ-ಕೌಲವ (ಬೆ.06.56-ರಾ.05.56-ರಾ.05.00)
ಮಳೆ ನಕ್ಷತ್ರ: ಚಿತ್ತಾ / ಮಾಸ: ಕನ್ಯಾ / ತೇದಿ: 26

ರಾಶಿ ಭವಿಷ್ಯ :

ಮೇಷ : ವರಿಷ್ಠರ ಪ್ರಸನ್ನತೆಯಿಂದ ಉದ್ಯೋಗಿಗಳಿಗೆ ಹುಮ್ಮಸ್ಸು ಹೆಚ್ಚಲಿದೆ, ತಾಳ್ಮೆಯಿಂದ ಕೆಲಸ ನಿರ್ವಹಿಸಿ
ವೃಷಭ : ಬರಹಗಾರರು, ಚಿತ್ರಕಲಾವಿದರಿಗೆ ಸೂಕ್ತ ಗೌರವ ಸಿಗಲಿದೆ, ಮನೆಯಲ್ಲಿ ಹರ್ಷದ ವಾತಾವರಣ
ಮಿಥುನ: ಧನಾಗಮನದಲ್ಲಿ ಏರುಪೇರು ಕಾಣುವಿರಿ
ಕಟಕ : ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ
ಸಿಂಹ: ಸಂಸಾರದಲ್ಲಿ ಸ್ವಲ್ಪ ಕಿರಿಕಿರಿ ಇದ್ದರೂ ಸಮಾಧಾನದಿಂದ ಸುಧಾರಿಸಿಕೊಂಡು ಹೋಗಿ
ಕನ್ಯಾ: ಸಾಧಕ-ಬಾಧಕಗಳ ಬಗ್ಗೆ ಯೋಚಿಸಿ ಮುನ್ನಡೆಯಿರಿ
ತುಲಾ: ಕೂಡಿಟ್ಟ ಹಣದ ವ್ಯಯದಿಂದ ಸದುಪಯೋಗವಾಗಿ ಪ್ರಶಂಸೆಗೆ ಒಳಗಾಗುವಿರಿ
ವೃಶ್ಚಿಕ : ಬುದ್ಧಿ ಜೀವಿಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ
ಧನುಸ್ಸು: ಯಂತ್ರೋಪಕರಣ ಮಾರಾಟಗಾರರಿಗೆ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಹೆಚ್ಚಿನ ಆದಾಯವಿದೆ
ಮಕರ: ಹಳೆಯ ವಿವಾದವೊಂದು ಬಗೆಹರಿಯಲಿದೆ
ಕುಂಭ: ಮಾತಿಗೆ ಮಾತು ಬೆಳೆಸದೆ ಮೌನದಿಂದ ಕಾರ್ಯ ಸಾಧಿಸಿ, ವರ್ತಕರಿಗೆ ಹೆಚ್ಚಿನ ಲಾಭವಿದೆ
ಮೀನ: ಮಿತವ್ಯಯದಿಂದ ಹಣ ಖರ್ಚು ಮಾಡಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin