ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಗ್ಯಾಂಗ್‍ರೇಪ್

ಈ ಸುದ್ದಿಯನ್ನು ಶೇರ್ ಮಾಡಿ

GangRape--01

ಶಹಜಾನ್‍ಪುರ್ (ಉ.ಪ್ರ.), ಅ.12-ಉತ್ತರಪ್ರದೇಶ ಸಾಮೂಹಿಕ ಅತ್ಯಾಚಾರಗಳ ತಾಣವಾಗುತ್ತಿದೆ. ಮೂವರು ದುಷ್ಕಮಿಗಳು ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಥಳಿಸಿ ಗ್ಯಾಂಗ್‍ರೇಪ್ ಮಾಡಿರುವ ನೀಚ ಕೃತ್ಯ ಗ್ರಾಮವೊಂದರಲ್ಲಿ ನಡೆದಿದೆ.  ಶಹಜಾನ್‍ಪುರ್‍ದ ಬನ್ನು ನಗಾರಿಯಾ ಗ್ರಾಮದಲ್ಲಿ ಈ ಹೀನ ಘಟನೆ ಜರುಗಿದೆ. ರಾತ್ರಿ 9ರ ಸುಮಾರಿನಲ್ಲಿ 15 ಮತ್ತು 17 ವರ್ಷದ ಅಕ್ಕತಂಗಿ ನೈಸರ್ಗಿಕ ಕರೆ ಮೇರೆಗೆ ಮನೆಯಿಂದ ಹೊರಗೆ ಬಂದಾಗ ಮೂವರು ದುಷ್ಕರ್ಮಿಗಳು ಅವರನ್ನು ಹತ್ತಿರದ 95 ಹೊಲಕ್ಕೆ ಎಳೆದೊಯ್ದು ಥಳಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಡ್ನಾಪರ್ ಪೊಲೀಸ್ ಠಾಣೆಯ ಅಧಿಕಾರಿ ಓಂ ಪ್ರಕಾಶ್ ಗೌತಮ್ ತಿಳಿಸಿದ್ದಾರೆ. ಈ ಕೃತ್ಯದಲ್ಲಿ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ಕಾಮುಕರ ವಿರುದ್ಧ ಪ್ರಕರಣ ದಾಖಲಾಗಿದ್ದು ಅವರ ಪತ್ತೆ ಕಾರ್ಯ ಮುಂದುವರಿದಿದೆ.

Facebook Comments

Sri Raghav

Admin