ಒಂದು ಗತಿ ಕಾಣಿಸ್ತೀವಿ ಎಂದ ಟ್ರಂಪ್, ಬೆಂಕಿಯ ಮಳೆಗರೆಯುತ್ತೇವೆ ಎಂದ ಕಿಮ್

ಈ ಸುದ್ದಿಯನ್ನು ಶೇರ್ ಮಾಡಿ

Kim-Trump--01

ವಾಷಿಂಗ್ಟನ್, ಅ.12-ಕಿರಿಕ್ ದೇಶ ಎಂದೇ ಕುಖ್ಯಾತಿ ಪಡೆದಿರುವ ಉತ್ತರ ಕೊರಿಯಾ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿನಕ್ಕೊಂದು ಹೇಳಿಕೆ ನೀಡುತ್ತಲೇ ಇದ್ದಾರೆ. ಆ ರಾಷ್ಟ್ರ ತಂದೊಡ್ಡಿರುವ ಸಮಸ್ಯೆ ಗರಿಷ್ಠ ಹಂತ ತಲುಪಿದೆ. ಇದಕ್ಕಾಗಿ ಉತ್ತರ ಕೊರಿಯಾಗೆ ಏನಾದರೂ ಒಂದು ಗತಿ ಕಾಣಿಸಲೇಬೇಕು ಎಂದು ಹೇಳಿದ್ದಾರೆ.  ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿರುವ ಉತ್ತರಕೊರಿಯಾದ ರಾಕೆಟ್ ಮ್ಯಾನ್ ಕುಖ್ಯಾತಿಯ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಅಮೆರಿಕದ ಯುದ್ದದ ಕಿಡಿ ಹೊತ್ತಿಸಿದೆ. ಇದಕ್ಕೆ ಅದು ತಕ್ಕ ಪ್ರತಿಫಲ ತೆರಬೇಕಾಗುತ್ತದೆ. ನಾವು ಅಮೆರಿಕ ಮೇಲೆ ಬೆಂಕಿ ಮಳೆಗರೆಯುತ್ತೇವೆ ಎಂದು ಗುಡುಗಿದ್ದಾರೆ.

ಉತ್ತರ ಕೊರಿಯಾದ ಪುನರಾವರ್ತಿತ ಕ್ಷಿಪಣಿ ಮತ್ತು ಅಣ್ವಸ್ತ್ರ ಪ್ರಯೋಗ ಕುರಿತು ವಿಭಿನ್ನ ನಿಲುವು ತಳೆದಿರುವ ಟ್ರಂಪ್ ಪಯೊಂಗ್‍ಯಾಂಗ್ ಮೇಲೆ ದಾಳಿ ನಡೆಸುವ ಬಗ್ಗೆ ಪದೇ ಪದೇ ಮುನ್ಸೂಚನೆ ನೀಡುತ್ತಲೇ ಇದ್ದಾರೆ. ಇದಕ್ಕೆ ಆ ದೇಶದ ಸರ್ವಾಧಿಕಾರಿ ಕಿಮ್ ಜಾಂಗ್ -ಉನ್ ಕೂಡ ಪ್ರತಿ ಹೇಳಿಕೆ ನೀಡುತ್ತಿದ್ದು, ವಾಕ್ಸಮರದೊಂದಿಗೆ ಯುದ್ಧದ ದಟ್ಟ ಕಾರ್ಮೋಡ ಕವಿದಿದೆ.

ವಿನಾಕಾರಣ ಯುದ್ಧದ ಕಿಡಿ ಹೊತ್ತಿಸಿರುವ ಅಮೆರಿಕ ಮೇಲೆ ನಾವು ಅಗ್ನಿ ಕೆಂಡಗಳನ್ನು ಸುರಿಸುತ್ತೇವೆ ಎಂದು ಕಿಮ್ ಕಿಡಿಕಾರಿದ್ದಾರೆ.  ಉತ್ತರ ಕೊರಿಯಾಗೆ ತಕ್ಕ ಪಾಠ ಕಲಿಸಲು ನಾನು ವಿಭಿನ್ನ ಧೋರಣೆ ಅನುಸರಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದೇನೆ. ಇತರ ವ್ಯಕ್ತಿಗಳಿಗಿಂತ ನನ್ನ ಬಳಿ ಬೇರೆ ಮಾರ್ಗವಿದೆ. ನನ್ನ ವಿಧಾನವು ಅತ್ಯಂತ ಪ್ರಬಲ ಮತ್ತು ಕಠಿಣವಾಗಿರುತ್ತದೆ ಎಂದು ಟ್ರಂಪ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಗುಡುಗಿದ್ದಾರೆ.
ಉತ್ತರ ಕೊರಿಯಾದ ಪ್ರಚೋದನಾತ್ಮಕ ಕ್ಷಿಪಣಿ ಮತ್ತು ಅಣ್ವಸ್ತ್ರ ಪರೀಕ್ಷೆಗಳಿಗೆ ಪ್ರತಿಯಾಗಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಆಯ್ಕೆ ಬಗ್ಗೆ ಟ್ರಂಪ್ ನಿನ್ನೆಯಷ್ಟೇ ತಮ್ಮ ಹಿರಿಯ ಸೇನಾ ಸಲಹೆಗಾರರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದರು.

ಇದೇ ವೇಳೆ ಪಯೊಂಗ್‍ಯಾಂಗ್ ವಿರುದ್ಧ ತನ್ನ ಶಕ್ತಿ ಪ್ರದರ್ಶನಕ್ಕಾಗಿ ಕೊರಿಯಾ ದ್ವೀಪಕಲ್ಪದ ಮೇಳೆ ಅಮರಿಯ ಭಾರೀ ಬಾಂಬರ್ ವಿಮಾನಗಳು ಭೋರ್ಗರೆಯುತ್ತಾ ಹಾರಾಡಿದ್ದವು. ಈ ವರ್ಷ ಫೆಬ್ರವರಿಯಿಂದ ಉತ್ತರ ಕೊರಿಯಾ 22 ಕ್ಷಿಪಣಿಗಳನ್ನು ಉಡಾಯಿಸಿದೆ ಮತ್ತು 15 ಅಣ್ವಸ್ತ್ರ ಪ್ರಯೋಗಗಳನ್ನು ನಡೆಸಿದ್ದು, ಇದು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ತೀಕ್ಷ್ಣ ಪ್ರತಿಕ್ರಿಯೆಗೆ ಕಾರಣವಾಗಿದೆ.

Facebook Comments

Sri Raghav

Admin