ಕ್ಯಾಲಿಫೋರ್ನಿಯಾ ಕಾಡ್ಗಿಚ್ಚಿಗೆ ಬಲಿಯಾದವರ ಸಂಖ್ಯೆ 22ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Californiya--02

ಸಾಂತಾ ರೋಸಾ (ಅಮೆರಿಕ), ಅ.12-ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತ್ಯದಲ್ಲಿ ಕಾಡ್ಗಿಚ್ಚಿನಿಂದ ಮೃತಪಟ್ಟವರ ಸಂಖ್ಯೆ 22ಕ್ಕೇರಿದ್ದು, ಅನೇಕರು ಗಾಯಗೊಂಡಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ಪ್ರಾಣಿ-ಪಕ್ಷಿಗಳು ಮೃತಪಟ್ಟಿವೆ ಹಾಗೂ ಅಮೂಲ್ಯ ವನಸಂಪತ್ತಿಗೂ ಹಾನಿಯಾಗಿದೆ.
ಸಾಂತಾ ರೋಸಾ ಕೌಂಟಿಯಲ್ಲಿ ಕಾಡಿನ ಬೆಂಕಿಯ ರುದ್ರನರ್ತನಕ್ಕೆ ಅಪಾರ ಹಾನಿ ಸಂಭವಿಸಿದ್ದು 20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿ ಧಗಧಗಿಸುತ್ತಿರುವ ಜ್ವಾಲೆಗಳನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ.

ಇದು ಅತ್ಯಂತ ಗಂಭೀರ, ಶೋಚನೀಯ ಮತ್ತು ಭೀಕರ ದುರಂತ ಎಂದು ಕ್ಯಾಲಿಫೋರ್ನಿಯಾ ಅಗ್ನಿಶಾಮಕ ದಳದ ಮುಖ್ಯಸ್ಥ ಕೆನ್ ಪಿಮ್‍ಲೊಟ್ ವಿಷಾದಿಸಿದ್ದಾರೆ. ಒಣ ಹವೆಯಿಂದ ಕ್ಯಾಲಿಫೋರ್ನಿಯಾದ ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಗಾಳಿಯಿಂದ ಅಗ್ನಿಯ ಕೆನ್ನಾಲಿಗೆ ತೀವ್ರವಾಗಿ ವ್ಯಾಪಿಸುತ್ತಿದೆ. ಬೆಂಕಿಯ ಪ್ರಕೋಪವನ್ನು ನಂದಿಸಲು ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

Facebook Comments

Sri Raghav

Admin