ಜಾರ್ಖಂಡ್‍ನ ಕುಂತಿ ಜಿಲ್ಲೆಯಲ್ಲಿ 6 ಪಿಎಲ್‍ಎಫ್‍ಐ ಉಗ್ರರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Terror--01

ಕುಂತಿ( ಜಾರ್ಖಂಡ್), ಅ.12-ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ್ದ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ (ಪಿಎಲ್‍ಎಫ್‍ಐ) ಸಂಘಟನೆಯ ಆರು ಉಗ್ರಗಾಮಿಗಳನ್ನು ಜಾರ್ಖಂಡ್‍ನ ನಕ್ಸಲ್ ಹಾವಳಿಪೀಡಿತ ಕುಂತಿ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿದ ಪೊಲೀಸರು ಮೊಬೈಲ್ ಫೋನ್‍ಗಳು, ನೋಂದಣಿಯಾಗದ ಮೋಟಾರ್ ಸೈಕಲ್‍ಗಳು, ಸಂಘಟನೆಯ ಲೆಟರ್‍ಹೆಡ್‍ಗಳೂ ಸೇರಿದಂತೆ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾಲೋ ಪ್ರದೇಶದಲ್ಲಿ ಪಿಎಲ್‍ಎಫ್‍ಐ ಉಗ್ರರು ಸಭೆ ಸೇರಿಲಿದ್ದಾರೆ ಎಂಬ ಖಚಿತ ಸುಳಿವಿನ ಮೇಲೆ, ಪೊಲೀಸರು ಆ ಪ್ರದೇಶದ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ. ಕುಂತಿ ಜಿಲ್ಲೆಯ ಸವ್ದಾ ಗ್ರಾಮದಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಇನ್ನೂ ಮೂವರು ಉಗ್ರರು ಸೆರೆಸಿಕ್ಕಿದ್ದಾರೆ.

Facebook Comments

Sri Raghav

Admin