ಜಿಎಸ್‍ಟಿ ವ್ಯಾಪ್ತಿಗೆ ರಿಯಲ್ ಎಸ್ಟೇಟ್‍ ಉದ್ಯಮ

ಈ ಸುದ್ದಿಯನ್ನು ಶೇರ್ ಮಾಡಿ

GST-Real-Estate--01

ವಾಷಿಂಗ್ಟನ್, ಅ.12-ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಗರಿಷ್ಠ ಮೊತ್ತದ ತೆರಿಗೆ ವಂಚನೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅದನ್ನು ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಪರಿಧಿಯೊಳಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಈ ಸಂಬಂಧ ಅಸ್ಸಾಂ ರಾಜಧಾನಿ ಗುವಾಹತಿಯಲ್ಲಿ ನವೆಂಬರ್ 9ರಂದು ನಡೆಯಲಿರುವ ಜಿಎಸ್‍ಟಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ವಿತ್ತ ಸಚಿವರು ಹಾವರ್ಡ್ ಯೂನಿವರ್ಸಿಟಿಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.  ಭಾರತದಲ್ಲಿ ತೆರಿಗೆ ವಂಚನೆಯಾಗಿರುತ್ತಿರುವ ವಲಯಗಳಲ್ಲಿ ರಿಯಲ್ ಎಸ್ಟೇಟ್ ಕೂಡ ಒಂದು. ಈ ಕ್ಷೇತ್ರದಲ್ಲಿ ಸಾಕಷ್ಟು ಹಣ ಉತ್ಪತ್ತಿಯಾಗಿ ದೊಡ್ಡ ಮಟ್ಟದ ವ್ಯವಹಾರಗಳು ನಡೆಯುತ್ತವೆ. ಇಷ್ಟಾದರೂ ಈ ಉದ್ಯಮ ಜಿಎಸ್‍ಟಿ ವ್ಯಾಪ್ತಿಯಿಂದ ಹೊರಗಿದೆ. ಕೆಲವು ರಾಜ್ಯಗಳು ಈ ಬಗ್ಗೆ ಒತ್ತಡ ಹೇರುತ್ತಿವೆ. ಈ ಹಿನ್ನೆಲೆಯಲ್ಲಿ ಇದನ್ನು ಜಿಎಸ್‍ಟಿ ಪರಿಧಿಯೊಳಗೆ ತರಲು ಅಗತ್ಯವಿದೆ ಎಂಬುದು ನನ್ನ ವೈಯಕ್ತಿಕ ಸ್ಪಷ್ಟ ಅಭಿಪ್ರಾಯ ಎಂದು ಜೇಟ್ಲಿ ನುಡಿದರು.

ಭಾರತದ ತೆರಿಗೆ ಸುಧಾರಣೆಗಳ ಕುರಿತು ವಾರ್ಷಿಕ ಉಪನ್ಯಾಸದಲ್ಲಿ ಜಿಎಸ್‍ಟಿ ಪ್ರಯೋಜನೆಗಳ ಬಗ್ಗೆ ವಿವರಿಸಿದ ಅವರು. ಮುಂದಿನ ಜಿಎಸ್‍ಟಿ ಮಂಡಳಿ ಸಭೆಯಲ್ಲಿ ಈ ವಿಷಯ ಮುಖ್ಯವಾಗಿ ಚರ್ಚೆಗೆ ಬರಲಿದೆ. ಈ ಕುರಿತು ಪರ-ವಿರೋಧ ಅಭಿಪ್ರಾಯಗಳಿವೆ. ಇವುಗಳನ್ನು ಪರಾಮರ್ಶಿಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.  ರಿಯಲ್ ಎಸ್ಟೇಟ್ ಉದ್ಯಮವನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವುದರಿಂದ ಗ್ರಾಹಕರು ಇಡೀ ಉತ್ಪನ್ನದ ಮೇಲೆ ಏಕೈಕ ಅಂತಿಮ ತೆರಿಗೆಯನ್ನು ಮಾತ್ರ ಪಾವತಿಸುವ ವ್ಯವಸ್ಥೆ ಜಾರಿಗೆ ಬರುತ್ತದೆ ಎಂದು ಅವರು ತಿಳಿಸಿದರು.

ಬ್ಯಾಂಕಿಂಗ್ ವಲಯವನ್ನು ಸದೃಢಗೊಳಿಸುವ ಯೋಜನೆ ಕುರಿತು ಪ್ರಸ್ತಾಪಿಸಿದ ಹಣಕಾಸು ಸಚಿವರು, ಪ್ರಗತಿಗೆ ಪೂರಕವಾಗುವಂತೆ ಬ್ಯಾಂಕಿಂಗ್ ವಲಯದ ಸಾಮಥ್ರ್ಯ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದರು.

Facebook Comments

Sri Raghav

Admin