ಜೆಡಿಎಸ್’ಗೆ ಕೈಕೊಡಲು ಮುಂದಾದ ಪುಟ್ಟಣ್ಣಗೆ ಯಶವಂತಪುರದಿಂದ ಬಿಜೆಪಿ ಟಿಕೆಟ್

ಈ ಸುದ್ದಿಯನ್ನು ಶೇರ್ ಮಾಡಿ

JDS-Puttanna--02

ಬೆಂಗಳೂರು, ಅ.12- ಜೆಡಿಎಸ್ ತೊರೆಯಲು ತೀರ್ಮಾನಿಸಿರುವ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರು ಬಿಜೆಪಿ ಸೇರಲು ನಿರ್ಧರಿಸಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. 2008ರಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾಕರಂದ್ಲಾಜೆ ಅವರ ವಿರುದ್ಧ ಪರಾಭವಗೊಂಡಿದ್ದ ಎಸ್.ಟಿ.ಸೋಮಶೇಖರ್ ಗೌಡ ಅವರು ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಮತ್ತೆ ಕ್ಷೇತ್ರ ಉಳಿಸಿಕೊಳ್ಳಬೇಕು ಎಂಬ ಇರಾಧೆಯಿಂದ ಎಸ್.ಟಿ.ಸೋಮಶೇಖರ್‍ಗೌಡ ಅವರು ಕ್ಷೇತ್ರದಾದ್ಯಂತ ಉತ್ತಮ ಕೆಲಸ ಮಾಡುತ್ತಿದ್ದಾರೆ.
ಇವರ ವಿರುದ್ಧ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರನ್ನು ಕಣಕ್ಕಿಳಿಸಿ ಅವರನ್ನು ಮಣಿಸಬೇಕು ಎಂಬ ಇಚ್ಚೆ ಬಿಜೆಪಿಗಿದೆ. ಹೀಗಾಗಿ ಅಂತಹ ಪ್ರಭಾವಿ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದ್ದಾಗಲೇ ಕಣ್ಣಿಗೆ ಬಿದ್ದಿದ್ದು ಪುಟ್ಟಣ್ಣ. ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ದಿಸೆಯಿಂದಲೂ ಈ ಭಾಗದಲ್ಲಿ ಪ್ರಭಾವಿ ಮುಖಂಡರೆಂದೇ ಗುರುತಿಸಿಕೊಂಡಿರುವ ಪುಟ್ಟಣ್ಣ ಅವರು ಬಿಜೆಪಿಯ ಈ ಆಫರ್‍ಗೆ ಓಕೆ ಎಂದಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಮಶೇಖರ್‍ಗೌಡರ ವಿರುದ್ಧ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಜೆಡಿಎಸ್‍ನಿಂದ ಜವರಾಯಿಗೌಡ, ಕಾಂಗ್ರೆಸ್‍ನಿಂದ ಎಸ್.ಟಿ.ಸೋಮಶೇಖರ್‍ಗೌಡ ಹಾಗೂ ಬಿಜೆಪಿಯಿಂದ ಪುಟ್ಟಣ್ಣ ಅವರು ಕಣಕ್ಕಿಳಿಯುತ್ತಿರುವುದರಿಂದ ಯಶವಂತಪುರ ವಿಧಾನಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆಯಲಿದೆ.

Facebook Comments

Sri Raghav

Admin