ಪಾಕ್ ಸೈನಿಕರಿಂದ ಮತ್ತೆ ಗುಂಡಿನ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Firing--041

ಜಮ್ಮು, ಅ.12-ಕಾಶ್ಮೀರ ಕಣಿವೆಯ ಗಡಿ ಭಾಗದಲ್ಲಿ ಮತ್ತೆ ಪಾಕಿಸ್ತಾನಿ ಯೋಧರ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಖಾದಿ ಕರ್ಮಾರಾದ ಸೇನಾ ಮುಂಚೂಣಿ ನೆಲೆಗಳ ಮೇಲೆ ಇಂದು ಬೆಳಗ್ಗೆ ಪಾಕ್ ಸೈನಿಕರು ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ನಡೆಸಿದ್ದಾರೆ.

ಈ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ಧಾರೆ. ಅಕ್ಟೋಬರ್ 6ರಂದು ಪಾಕಿಸ್ತಾನಿ ಸೇನಾಪಡೆ ರಜೌರಿ ಜಿಲ್ಲೆಯ ಬಾಬಾ ಖೋರಿ ಮತ್ತು ಇತರ ಪ್ರದೇಶಗಳ ಮೇಲೆ ಗುಂಡಿನ ದಾಳಿ ನಡೆಸಿತ್ತು. ಈ ವರ್ಷದ ಆರಂಭದಿಂದಲೂ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸುತ್ತಲೇ ಇದೆ.

Facebook Comments

Sri Raghav

Admin