ಬಿಬಿಎಂಪಿ ವ್ಯಾಪ್ತಿಯ ಮೈದಾನಗಳಲ್ಲಿ ಮಾತ್ರ ಪಟಾಕಿ ಮಳಿಗೆ ತೆರೆಯಲು ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

Firecrack-002
ಬೆಂಗಳೂರು, ಅ.12-ದೀಪಾವಳಿ ಹಬ್ಬದ ಪ್ರಯುಕ್ತ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಾದ ಡಾ.ರಾಜ್‍ಕುಮಾರ್ ಬಯಲು ರಂಗಮಂದಿರ, ಮಲ್ಲೇಶ್‍ಪಾಳ್ಯ ಮುಖ್ಯರಸ್ತೆ, ವಾರ್ಡ್ ನಂ.57ರ ಆಟದ ಮೈದಾನದಲ್ಲಿ ತಾತ್ಕಾಲಿಕ ಪಟಾಕಿ ಮಳಿಗೆಗಳಿಗೆ ಪರವಾನಗಿ ನೀಡಲಾಗುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಡೈರೆಕ್ಟರ್ ಜನರಲ್ ಆ್ಯಂಡ್ ಕಮಾಡೆಂಡ್, ಹೋಂಗಾಡ್ಸ್, ಡೈರೆಕ್ಟರ್ ಆಫ್ ಫೈರ್, ಎಮರ್ಜೆನ್ಸಿ ಸರ್ವೀಸಸ್‍ನವರು ಈ ಸ್ಥಳಗಳನ್ನು ಪರಿಶೀಲಿಸಿ ನೀಡಲಾಗಿರುವ ಆಯ್ದ ಬಿಬಿಎಂಪಿ ವ್ಯಾಪ್ತಿಯ ಮೈದಾನಗಳಲ್ಲಿ ಮಾತ್ರ ಪಟಾಕಿ ಮಳಿಗೆ ತೆರೆಯಲು ಅರ್ಜಿ ಕರೆಯಲಾಗಿದೆ.   ಬಿಬಿಎಂಪಿ ವ್ಯಾಪ್ತಿಯ ಕೆಲವು ಮೈದಾನಗಳಲ್ಲಿ ಚಿಲ್ಲರೆಯಾಗಿ ಪಟಾಕಿ ಮಳಿಗೆಗಳನ್ನು ತೆರೆಯಲು ಸಾರ್ವಜನಿಕರಿಂದ ಅರ್ಜಿಗಳನ್ನು ಕರೆಯಲಾಗಿದ್ದು, ಮೈಸೂರು ರಸ್ತೆಯ ಸಿಎಆರ್ ಕೇಂದ್ರ ಕಚೇರಿಯಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ.

Facebook Comments

Sri Raghav

Admin