ಮಗ ಅಪಹರಣವಾಗಿ ಹತ್ಯೆಯಾದ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

Dead-Body

ಕಲಬುರಗಿ, ಅ.12- ಮಗನನ್ನು ಅಪಹರಿಸಿದ ದುಷ್ಕರ್ಮಿಗಳು ಹತ್ಯೆ ಮಾಡಿರುವ ಸುದ್ದಿ ತಿಳಿದ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸುಲ್ತಾನ್‍ಪುರ ನಿವಾಸಿ ಲಲಿತಾಬಾಯಿ (70) ಮೃತಪಟ್ಟ ತಾಯಿ. ಲಲಿತಾ ಬಾಯಿ ಅವರ ಮಗ ಮಾನಪ್ಪ (42) ಎಂಬುವರು ಜೆಸ್ಕಾಂನಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದರು. ಅ.7ರಂದು ದುಷ್ಕರ್ಮಿಗಳು ಮಾನಪ್ಪನನ್ನು ಅಪಹರಿಸಿ 6 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಬೇಡಿಕೆಯಂತೆ ಕುಟುಂಬಸ್ಥರು 6 ಲಕ್ಷ ಹಣ ಸಹ ನೀಡಿದ್ದರು. ಆದರೆ, ದುಷ್ಕರ್ಮಿಗಳು ತಮ್ಮ ವಿಷಯ ಬಾಯಿಬಿಡುತ್ತಾನೆಂದು ನಿರ್ಧರಿಸಿ ಮಾನಪ್ಪನನ್ನು ಹತ್ಯೆ ಮಾಡಿ ಸೈಯದ್ ಚಿಂಚೋಳಿ ಬಳಿ ಶವವನ್ನು ಎಸೆದು ಪರಾರಿಯಾಗಿದ್ದಾರೆ. ಮಗನನ್ನು ಹತ್ಯೆ ಮಾಡಿರುವ ವಿಷಯ ತಿಳಿದ ಲಲಿತಾಬಾಯಿ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಹುಡುಕಾಟ ನಡೆಸುತ್ತಿದ್ದಾರೆ.

Facebook Comments

Sri Raghav

Admin