ಮೊಬೈಲ್ ಕೊಡಿಸದ ತಂದೆ, ಸಾವಿಗೆ ಶರಣಾದ ಪುತ್ರಿ

ಈ ಸುದ್ದಿಯನ್ನು ಶೇರ್ ಮಾಡಿ

Fire-Girl-Suicide

ಪಣಜಿ, ಅ.12-ಮೊಬೈಲ್ ಫೋನ್ ಗೀಳಿಗೆ ಮತ್ತೊಂದು ಜೀವ ಬಲಿಯಾಗಿದೆ. ಮೊಬೈಲ್ ಕೊಡಿಸಲು ನಿರಾಕರಿಸಿದ ತಂದೆಯ ಹಠದಿಂದ ಬೇಸತ್ತ 17 ವರ್ಷ ಹುಡುಗಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕರಾವಳಿ ರಾಜ್ಯ ಗೋವಾದ ಶಂಖಲಿಮ್ ಗ್ರಾಮದಲ್ಲಿ ನಡೆದಿದೆ. ತನಗೆ ಮೊಬೈಲ್ ಫೋನ್ ಕೊಡಿಸುವಂತೆ ಕಳೆದ ಕೆಲವು ದಿನಗಳಿಂದಲೂ ಈಕೆ ಪಟ್ಟು ಹಿಡಿದಿದ್ದಳು. ಆದರೆ ತಂದೆ ಮಗಳ ಬೇಡಿಕೆಯನ್ನು ನಿರಾಕರಿಸಿದ್ದರು. ಇದರಿಂದ ಬೇಸತ್ತು ತನ್ನ ಮನೆಯಲ್ಲೇ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಸ್ವಯಂ ದಹನಗೊಂಡಳು. ದೇಶದ ವಿವಿಧೆಡೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಇಂಥ ಪ್ರಕರಣಗಳು ವರದಿಯಾಗುತ್ತಲೇ ಇದೆ.

Facebook Comments

Sri Raghav

Admin