ಮೊಬೈಲ್ ಬಳಕೆದಾರರೇ ಎಚ್ಚರ : ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು ಹೊಸ ರೆಡ್‍ಮಿ ನೋಟ್ 4 ಮೊಬೈಲ್..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಅ.12- ಮೊಬೈಲ್ ಬಳಕೆದಾರರೇ ಎಚ್ಚರ… ಯಾವ ಮೊಬೈಲ್‍ಗಳು ಯಾವ ಗಳಿಗೆಯಲ್ಲಿ ಏನಾಗ್ತಾವೋ ಗೊತ್ತಿಲ್ಲ. ಒಟ್ಟಿನಲ್ಲಿ ನಿಮ್ಮ ಹುಷಾರ್‍ನಲ್ಲಿ ನೀವಿರೋದು ಒಳ್ಳೆಯದು. ಇಂದು ಬೆಳಗ್ಗೆ ರೆಡ್‍ಮಿ ನೋಟ್ 4 ಮೊಬೈಲ್ ಬ್ಲಾಸ್ಟರ್ ಆಗಿದೆ. ಗ್ರಾಹಕರೊಬ್ಬರು ಹೊಸದಾಗಿ ಖರೀದಿಸಿದ್ದ ರೆಡ್ ಮಿ ನೋಟ್ 4 ಮೊಬೈಲ್‍ಗೆ ಸ್ಕ್ರೀನ್ ಗಾರ್ಡ್ ಹಾಕಿಸಲು ನಗರದ ಟೌನ್‍ಹಾಲ್ ವೃತ್ತದಲ್ಲಿರುವ ಅಂಗಡಿಗೆ ಬಂದಿದ್ದಾರೆ. ಅಂಗಡಿಯ ಮಾಲೀಕ ಬ್ಯಾಟರಿಯನ್ನು ರೀಮೂವ್ ಮಾಡಿದ ತಕ್ಷಣ ಮೊಬೈಲ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿದ್ದು ಈ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೊಬೈಲ್ ಬ್ಲಾಸ್ಟ್ ಆದ ರಭಸಕ್ಕೆ ಮೊಬೈಲ್ ಅಂಗಡಿ ಮಾಲೀಕ ಪ್ರದೀಪ್‍ನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಬಳಕೆದಾರರೇ ಎಚ್ಚರ… ಮೊಬೈಲ್‍ಗಳನ್ನು ಚಾರ್ಜ್‍ಗೆ ಹಾಕಿ ಮಾತನಾಡಬೇಡಿ ಹಾಗೂ ಬಳಸಬೇಡಿ. ಈಗ ಮಳೆಗಾಲ, ಗುಡಿಲು-ಸಿಡಿಲುಗಳು ಬಂದರೆ ಚಾರ್ಜ್ ಮಾಡಬೇಡಿ. ಬ್ಯಾಟರಿ ಅಧಿಕ ಬಿಸಿಯಾಗುವವರೆಗೂ ಬಳಸಬೇಡಿ. ಈ ತರಹದ ಲಕ್ಷಣಗಳು ಕಂಡು ಬಂದರೆ ಕೂಡಲೇ ಮೊಬೈಲ್ ಶಾಪ್‍ಗಳಲ್ಲಿ ಪರೀಕ್ಷಿಸಿಕೊಳ್ಳುವುದು ಸೂಕ್ತ.

Facebook Comments

Sri Raghav

Admin