ವಕೀಲರಿಗೆ ಹಿರಿಯ ಪದನಾಮಕ್ಕೆ ಸುಪ್ರೀಂ ಮಾರ್ಗಸೂಚಿ

ಈ ಸುದ್ದಿಯನ್ನು ಶೇರ್ ಮಾಡಿ

Suprem-Court

ನವದೆಹಲಿ, ಅ.12-ವಕೀಲರುಗಳಿಗೆ ಹಿರಿಯ ಪದನಾಮ (ಸೀನಿಯರ್ ಡೆಸಿಗ್ನೇಷನ್)ನೀಡಲು ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಶಾಶ್ವತ ಸಮಿತಿ ಸ್ಥಾಪನೆ ಸೇರಿದಂತೆ ಸುಪ್ರೀಂಕೋರ್ಟ್ ಇಂದು ಕೆಲವು ಮಾರ್ಗಸೂಚಿಗಳನ್ನು ನೀಡಿದೆ.  ನ್ಯಾಯಮೂರ್ತಿ ರಂಜನ್ ಗೊಗೈ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಈ ಸಮಿತಿಯಲ್ಲಿ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿ ಅವರಲ್ಲದೇ, ಸರ್ವೋಚ್ಛ ನ್ಯಾಯಾಲಯ ಅಥವಾ ಹೈಕೋರ್ಟ್‍ನ ಹಿರಿಯ ನ್ಯಾಯಾಧೀಶರೊಬ್ಬರು ಇರುತ್ತಾರೆ ಎಂದು ಹೇಳಿದೆ. ವಕೀಲರಿಗೆ ಹಿರಿಯ ಪದನಾಮ ನೀಡಿಕೆ ಕುರಿತು ಉದ್ಭವಿಸಿರುವ ಗೊಂದಲ ನಿವಾರಣೆಗಾಗಿ ಸುಪ್ರೀಂಕೋರ್ಟ್ ಈ ಮಾರ್ಗಸೂಚಿಗಳನ್ನು ಹೊರಡಿಸಿದೆ.

Facebook Comments

Sri Raghav

Admin