ಒತ್ತಡ ಹಾಕಿ ರಾಜ್ಯೋತ್ಸವ ಪ್ರಶಸ್ತಿ ಪಡೆಯುತ್ತಿದ್ದವರಿಗೆ ಈ ಭಾರಿ ನಿರಾಸೆ …!

ಈ ಸುದ್ದಿಯನ್ನು ಶೇರ್ ಮಾಡಿ

Rajyotsava-Award-01

ಬೆಂಗಳೂರು,ಅ.13-ನಾಡು-ನುಡಿ, ಸಾಹಿತ್ಯ, ಭಾಷೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ರಾಜ್ಯೋತ್ಸವ ಪ್ರಶಸ್ತಿಗೆ ರಾಜ್ಯ ಸರ್ಕಾರ ಈ ಬಾರಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವವರು 60 ವರ್ಷ ಮೇಲ್ಪಟ್ಟಿರಬೇಕೆಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿಯಮವನ್ನು ಜಾರಿ ಮಾಡಿದೆ. ಇದರಿಂದ ಪ್ರತಿ ಬಾರಿ ತಮ್ಮ ತಮ್ಮ ಗಾಡ್‍ಫಾದರ್‍ಗಳ ಮೂಲಕ ಒತ್ತಡ ಹಾಕಿ ರಾಜ್ಯೋತ್ಸವ ಪ್ರಶಸ್ತಿ ಪಡೆಯುತ್ತಿದ್ದ ಕೆಲವು ಅನರ್ಹರಿಗೆ ಭಾರೀ ನಿರಾಸೆಯಾಗಿದೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಹೊರಡಿಸಿರುವ ಅಧಿಸೂಚನೆ ಪ್ರಕಾರ 60 ವರ್ಷ ಮೇಲ್ಪಟ್ಟವರ ಅರ್ಜಿ ಪರಿಗಣಿಸಬೇಕು, ವಯಸ್ಸಿನ ಅಂತರದಲ್ಲಿ ಏರುಪೇರಿದ್ದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸುವಂತೆ ಸಲಹಾ ಸಮಿತಿಗೆ ಸೂಚಿಸಿದ್ದಾರೆ. ನ.1ರಂದು ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವುದು ಸಂಪ್ರದಾಯವಾಗಿದೆ. ಆದರೆ ಈ ಹಿಂದೆ ಈ ಪ್ರಶಸ್ತಿಯನ್ನು ಲಾಬಿ ನಡೆಸಿ ಪಡೆಯುತ್ತಿದ್ದರಿಂದ ಅರ್ಹರು ಪ್ರಶಸ್ತಿಯಿಂದ ವಂಚಿತರಾಗುತ್ತಿದ್ದರು. ಇಂತಹ ಲಾಬಿ ಕಡಿವಾಣ ಹಾಕಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪಡೆಯಲು ಈ ನಿಯಮವನ್ನು ಜಾರಿ ಮಾಡಿದ್ದಾರೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ , ಧರಂಸಿಂಗ್, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಅಧಿಕಾರವಧಿಯಲ್ಲಿ ಬೇಕಾಬಿಟ್ಟಿ ಪ್ರಶಸ್ತಿಗಳನ್ನು ನೀಡಲಾಗಿತ್ತೆಂಬ ಆರೋಪ ಕೇಳಿಬಂದಿತ್ತು. ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆಯೂ ಕೊನೆ ಕ್ಷಣದಲ್ಲಿ ಕೆಲವರು ಪ್ರಶಸ್ತಿಯನ್ನು ಸ್ವೀಕರಿಸಿದ ನಿದರ್ಶನಗಳಿದ್ದವು.

ಇದಕ್ಕೆ ಕಡಿವಾಣ ಹಾಕಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರಾದವರನ್ನು ಮಾತ್ರ ಆಯ್ಕೆ ಮಾಡಲೆಂದೇ ಆಯ್ಕೆ ಸಮಿತಿಯನ್ನು ಮಾಡಿದೆ. 2012ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ 661 ಅರ್ಜಿಗಳು ಹಾಕಲಾಗಿತ್ತು. ಕೇವಲ 64 ಮಂದಿಗೆ ಮಾತ್ರ ಪ್ರಶಸ್ತಿಯನ್ನು ನೀಡಲಾಗಿತ್ತು.  2013ರಲ್ಲಿ 1310 ಅರ್ಜಿಗಳು, 2014ರಲ್ಲಿ 959 , 2015ರಲ್ಲಿ 1163, ಹಾಗೂ 2016ರಲ್ಲಿ 831 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. 2017ರಲ್ಲಿ 559 ಅರ್ಜಿಗಳು ಬಂದಿದ್ದವಾದರೂ 62 ಮಂದಿಗೆ ಮಾತ್ರ ಪ್ರಶಸ್ತಿಯನ್ನು ನೀಡಲಾಗಿತ್ತು.

ಪ್ರಸಕ್ತ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಈಗಾಗಲೇ ಆಕಾಂಕ್ಷಿಗಳಿಂದ ರಾಜ್ಯ ಸರ್ಕಾರ ಅರ್ಜಿಯನ್ನು ಆಹ್ವಾನಿಸಿದೆ. ಇದಕ್ಕಾಗಿ 12 ಮಂದಿ ಸಲಹಾ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಮಿತಿ ಶಿಫಾರಸ್ಸು ಮಾಡುವವರಿಗೆ ಮಾತ್ರ ಈ ತಿಂಗಳ 30 ಅಥವಾ 31ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರ ಪಟ್ಟಿ ಘೋಷಣೆಯಾಗಲಿದೆ. ನವೆಂಬರ್ 1ರಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ರಾಜ್ಯೋತ್ಸವ ಪ್ರಶಸ್ತಿಗೆ ಒಂದು ಲಕ್ಷ ನಗದು, 20 ಗ್ರಾಂ ಚಿನ್ನ , ಫಲಪುಷ್ಪ ನೀಡಿ ಗೌರವಿಸಲಿದೆ.

Facebook Comments

Sri Raghav

Admin