ಡಾ.ಬಿ.ಎನ್.ವಿ.ಸುಬ್ರಹ್ಮಣ್ಯ ಪುತ್ಥಳಿ ಅನಾವರಣ

ಬೆಂಗಳೂರು,ಅ.13-ಜ್ಯೋತಿ ಚಾರಿಟಬಲ್ ಟ್ರಸ್ಟ್ ಹಾಗೂ ಧಾರ್ಮಿಕ ಪ್ರವರ ಡಾ.ಬಿ.ಎನ್.ವಿ.ಸುಬ್ರಹ್ಮಣ್ಯ ವಿಚಾರ ವೇದಿಕೆ ವತಿಯಿಂದ ಅ.15ರಂದು ಮಧ್ಯಾಹ್ನ 3.30ಕ್ಕೆ ಕೀರ್ತಿಶೇಷ ಡಾ.ಬಿ.ಎನ್.ವಿ.ಯವರ ಪುತ್ಥಳಿ ಹಾಗೂ ಸ್ಮಾರಕ ಅನಾವರಣ ಕಾರ್ಯಕ್ರಮವನ್ನು ಕನಕಪುರದ ಜ್ಯೋತಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಕೇಂದ್ರ ಸಚಿವ ಅನಂತ್‍ಕುಮಾರ್ ಉದ್ಘಾಟಿಸಲಿದ್ದು, ಡಾ.ಎ.ವಿ.ಪ್ರಸನ್ನ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅದಮ್ಯ ಚೇತನ ಟ್ರಸ್ಟ್‍ನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಚಲನಚಿತ್ರ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಆಗಮಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಶಾಸಕ ಎಸ್.ಟಿ.ಸೋಮಶೇಖರ್ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ.ಜಿ.ಎನ್.ವಿ.ಯವರ ಸಾಕ್ಷ್ಯಚಿತ್ರ ಬಿಡುಗಡೆ-ಪ್ರದರ್ಶನ ನಡೆಯಲಿದೆ ಎಂದು ಟ್ರಸ್ಟಿ ಮೆ.ನರಸಿಂಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments