ನ್ಯಾಯಾಧೀಶರ ಸಹಿ ನಕಲು ಮಾಡಿದ ವಕೀಲ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

Forgery

ಕುಣಿಗಲ್, ಅ.13-ಕೆಲವು ಕಂಪೆನಿಗಳಿಗೆ ಕಾನೂನು ಸಲಹೆಗಾರರಾಗಿ ನೇಮಕವಾಗಿರುವ ವಕೀಲರೊಬ್ಬರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಸಹಿಯನ್ನು ನಕಲು ಮಾಡಿ ಸಿಕ್ಕಿ ಬಿದ್ದು ಅಮಾನತುಗೊಂಡಿದ್ದಾರೆ. ತಾಲೂಕಿನ ಹುತ್ರಿದುರ್ಗ ಹೋಬಳಿ ಬೊಮ್ಮೆನಳ್ಳಿ ಗ್ರಾಮದ ಬಿ.ಎನ್.ಶಿವಣ್ಣ ಅಮಾನತುಗೊಂಡಿರುವ ವಕೀಲ. ಈತ ಕಳೆದ 10 ವರ್ಷಗಳಿಂದಲೂ ಕುಣಿಗಲ್ ಜೆಎಂಎಫ್‍ಸಿ ನ್ಯಾಯಾಲಯ ಹಾಗೂ ಬೆಂಗಳೂರು ಸಿವಿಲ್ ಕೋರ್ಟ್ ಮತ್ತು ಹೈಕೋರ್ಟ್ ವಕೀಲ ವೃತ್ತಿ ನಿರ್ವಹಿಸುತ್ತಿದ್ದರು. ಇವರು ಬೆಂಗಳೂರಿನ ಕೆಲವು ಪ್ರತಿಷ್ಠಿತ ಕಂಪೆನಿಗಳಲ್ಲಿ ಕಾನೂನು ಸಲಹೆಗಾರರಾಗಿ ನೇಮಕವಾಗಿದ್ದರು. ಅಲ್ಲದೆ ಕಂಪೆನಿಗಳ ವಿವಾದ, ವ್ಯಾಜ್ಯಗಳನ್ನು ಇತ್ಯರ್ಥಪಡಿಸುತ್ತಿದ್ದರು. ಆದೇಶದ ಸಂದರ್ಭದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಧೀಶರ ಸಹಿಯನ್ನು ನಕಲು ಮಾಡಿ ಕಂಪನಿಗಳಿಗೆ ನೀಡುತ್ತಿದ್ದರು. ಈ ವಿಷಯ ಕಂಪೆನಿಗಳಿಗೆ ಹಲವು ವರ್ಷಗಳ ನಂತರ ತಿಳಿದಿದ್ದು, ಕಂಪೆನಿಗಳು ಈತನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ನಕಲಿ ಸಹಿ ಎಂದು ತಿಳಿದ ನಂತರ ಇವರ ವಿರುದ್ಧ ಬಾರ್ ಕೌನ್ಸಿಲ್ ಆಫ್ ಅಸೋಸಿಯೇಷನ್‍ಗೆ ದೂರು ನೀಡಿದ್ದು, ಇದನ್ನು ಪರಿಶೀಲಿಸಿದ್ದು, ಈತನು ವೃತ್ತಿ ಮಾಡದಂತೆ ಅಮಾನತು ಮಾಡಿ ಆದೇಶ ಹೊರಡಿಸಿದೆ. ಈ ಬಗ್ಗೆ ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೂ ಪ್ರತಿಯನ್ನು ರವಾನಿಸಲಾಗಿದೆ.

Facebook Comments

Sri Raghav

Admin