ಬೆಂಗಳೂರಲ್ಲಿ ಭೂಕುಸಿತಕ್ಕೆ ಸಿಲುಕಿದ ಇನ್ನೋವಾ ಕಾರುಗಳು (Video)

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.13- ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದ ನಗರದಲ್ಲಿ ಭೂಕುಸಿತವಾಗಿದೆ.  ಬಸವನಗುಡಿಯ ಜೈನ್ ಕಾಲೇಜು ರಸ್ತೆ ಬಳಿ ಭೂ ಕುಸಿತವಾಗಿ ಎರಡು ಇನ್ನೋವಾ ಕಾರು ಸಿಲುಕಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭೂಮಿ ಕುಸಿಯುತ್ತಿದ್ದಂತೆ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದು, ಈ ಭಾಗದಲ್ಲಿ ಕೆಲ ಕಾಲ ಸಂಚಾರ ಹಸ್ತವ್ಯಸ್ತಗೊಂಡಿತ್ತು.

ಸುದ್ದಿ ತಿಳಿದ ಬಸವನಗುಡಿ ಸಂಚಾರಿ ಪೊಲೀಸರು ಜೆಸಿಬಿ ಮೂಲಕ ಕಾರುಗಳನ್ನು ತೆರವುಗೊಳಿಸಿದ್ದಾರೆ. ಕಳೆದ ಮೂರು ತಿಂಗಳ ಹಿಂದಷ್ಟೆ ಈ ಪ್ರದೇಶದಲ್ಲಿ ಭೂ ಕುಸಿತವಾಗಿತ್ತು ಎನ್ನಲಾಗಿದೆ. ಭೂಕುಸಿತದ ಸ್ಥಳದಲ್ಲಿ ಹಳೆಯ ಚರಂಡಿಯಿದ್ದು, ಸೂಕ್ತ ರೀತಿಯಲ್ಲಿ ಮುಚ್ಚಿರಲಿಲ್ಲ ಎಂದು ತಿಳಿದು ಬಂದಿದೆ.

 

Facebook Comments

Sri Raghav

Admin