ಭಾರತ ಆರ್ಥಿಕತೆ ಬಗ್ಗೆ ಅಮೆರಿಕ ಧನಾತ್ಮಕ ಭಾವನೆ : ಜೇಟ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Arun--01

ವಾಷಿಂಗ್ಟನ್, ಅ. 13- ಭಾರತ ಸರ್ಕಾರವು ತನ್ನ ಅರ್ಥ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿರುವುದನ್ನು ಮನಗಂಡಿರುವ ಇಲ್ಲಿನ ಬಂಡವಾಳ ಹೂಡಿಕೆದಾರರು ನಮ್ಮ ದೇಶದ ಬಗ್ಗೆ ಧನಾತ್ಮಕವಾದ ನಿಲುವು ತಳೆದಿದ್ದು, ಹೂಡಿಕೆಗೆ ಉತ್ಸುಕರಾಗಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾನಿಟರಿ ಫಂಡ್(ಈಎಂಎಫ್) ಮತ್ತು ವಿಶ್ವ ಬ್ಯಾಂಕ್ (ಡಬ್ಲ್ಯುಬಿ) ಸಂಯುಕ್ತಾಶ್ರಯದಲ್ಲಿ ಇಲ್ಲಿ ಆಯೋಜಿಸಿರುವ ವಾರ್ಷಿ ಸಮಾವೇಶದಲ್ಲಿ ಭಾಗವಹಿಸಲು ಉನ್ನತ ಮಟ್ಟದ ನಿಯೋಗದೊಂದಿಗೆ ಒಂದು ವಾರ ಕಾಲದ ಅಮೆರಿಕ ಭೇಟಿಯಲ್ಲಿರುವ ಜೇಟ್ಲಿ. ಅವರು ಈಗಾಗಲೆ ನ್ಯೂಯಾರ್ಕ್ ಮತ್ತು ಬೋಸ್ಟನ್‍ಗಳಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶಗಳಲ್ಲಿ ಭಾಗವಹಿಸಿ ಭಾಷಣ ಮಾಡಿದ್ದಾರೆ.

ಭಾರತದಲ್ಲಿ ಸುಸ್ಥಿರ ಆರ್ಥ ವ್ಯವಸ್ಥೆ ಬಿರುಸಿನಿಂದ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಭಾರತವು ಆರ್ಥಿಕ ಪ್ರಗತಿಯಲ್ಲಿ ವಿಶ್ವದಲ್ಲೇ ಮಹತ್ವದ ಪಾತ್ರ ವಹಿಸಲಿದೆ ಎಂಬುದನ್ನು ಅಮೆರಿಕದ ಬಂಡವಾಳ ಹೂಡಿಕೆದಾರರು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದಾರೆ. ಆರ್ಥಿಕ ಸುಧಾರಣೆಯಲ್ಲಿ ಭಾರತದ ಜೊತೆ ಕೈಜೋಡಿಸಲು ಈ ಹೂಡಿಕೆದಾರರು ಅತ್ಯಂತ ಉತ್ಸುಕತೆಯಿಂದಿದ್ದಾರೆ ಎಂದು ಜೇಟ್ಲಿ ಇಲ್ಲಿನ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

Facebook Comments

Sri Raghav

Admin