ಮುಂಬೈ ಮಹಿಳೆ ಅಪಹರಿಸಿ ಗುಜರಾತ್‍ನಲ್ಲಿ ಗ್ಯಾಂಗ್ ರೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

GangRape--01

ಥಾಣೆ, ಅ. 13-ಮುಂಬೈಯ ಮಹಿಳೆಯೊಬ್ಬಳನ್ನು ಅಪಹರಿಸಿ ಗುಜರಾತ್‍ಗೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಚಾರ ಎಸಗಿದ ಆರೋಪದಲ್ಲಿ ಅಲ್ಲಿನ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ದೇವಸ್ಥಾನಗಳು ಮತ್ತು ಪ್ರವಾಸಿ ಸ್ಥಳಗಳನ್ನು ತೋರಿಸುವುದಾಗಿ ನಂಬಿಸಿದ ಗುಜರಾತ್‍ನ ವಸಾಯ್ ಫಾಟಾದ ಇಬ್ಬರು ಆರೋಪಿಗಳು ಅ. 3ರಂದು ಮುಂಬೈ ಮಹಿಳೆಯೊಬ್ಬಳನ್ನು ಕರೆದೊಯ್ದಿದ್ದಾರೆ. ಆಕೆಯನ್ನು ವಸಾಯ್ ಫಾಟಾದ ಇನ್ನೊಬ್ಬ ವ್ಯಕ್ತಿಯ ಮನೆಗೆ ಕರೆದೊಯ್ದಿದ್ದು ಅಲ್ಲಿ ಅತ್ಯಾಚಾರ ಎಸಗಿದ್ದಾರೆ.

ಅಷ್ಟೇ ಅಲ್ಲದೆ ಈ ಮಹಿಳೆಯನ್ನು ಮತ್ತೊಬ್ಬ ವ್ಯಕ್ತಿಗೆ 1.5 ಲಕ್ಷಕ್ಕೆ ಮಾರಾಟ ಮಾಡುವ ಹುನ್ನಾರ ನಡೆಸಿದ್ದಾರೆ. ಮಹಿಳೆ ಕೊನೆಗೆ ಅಪಹರಣಕಾರರ ವಿರುದ್ಧ ಹೋರಾಡಿ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಗಿದ್ದು ಮುಬೈ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ದೂರು ಪಡೆದು ಅದನ್ನು ವಸಾಯ್ ಫಾಟಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕಾರ್ಯಪ್ರವೃತ್ತರಾದ ಅಲ್ಲಿನ ಪೊಲೀಸರು ಮೂವರನ್ನು ಬಂಧಿಸಿದ್ದು, ಈಕೆಯನ್ನು ಖರೀದಿಸಲು ಪ್ರಯತ್ನಿಸಿದ್ದ ವ್ಯಕ್ತಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

Facebook Comments

Sri Raghav

Admin